ಹುಬ್ಬಳ್ಳಿ : ಭೈರಿದೇವರಕೊಪ್ಪದ ದರ್ಗಾ ಬಹಳ ವರ್ಷದ ಹಳೆಯ ದರ್ಗಾ. ಬಿಆರ್ ಟಿಎಸ್ ರಸ್ತೆ ಪೂರ್ಣವಾದರೂ ಕೋರ್ಟ್ ಆದೇಶ ಇಟ್ಟುಕೊಂಡು ತೆರವು ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಹೇಳಿದರು.
ಹುಬ್ವಳ್ಳಿ – ಧಾರವಾಡ ಮಹಾನಗರ ಶಾಂತಿಯುತವಾಗಿದೆ. ಬಿಆರ್‌ಟಿಎಸ್ ರಸ್ತೆ ಬಿಟ್ಟು ದೂರವೇ ಇದೆ. ಆದಾಗ್ಯೂ ಸಹ ತರಾತುರಿಯಲ್ಲಿ ತೆರವು ಕೈಗೊಂಡಿದ್ದಾರೆ. ಇದು ಖಂಡನೀಯವಾಗಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಹೆದ್ದಾರಿಯಲ್ಲಿದ್ದ ದರ್ಗಾವನ್ನು ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ತೆರವು ಮಾಡಿಕೊಳ್ಳುತ್ತೇವೆ. ಸ್ವಲ್ಪ ಕಾಲಾವಕಾಶ ಕೊಡಬೇಕು. ಅವಸರ ಮಾಡುವ ಸನ್ನಿವೇಶ ಇಲ್ಲ ಎಂದು ಸರ್ಕಾರಕ್ಕೆ, ಅಧಿಕಾರಿಗಳಿಗೆ ಮಂಗಳವಾರ ರಾತ್ರಿ ವಿವರಿಸಿದೆವು. ಆದರೆ, ಅವರು ಸ್ಪಂದಿಸಲಿಲ್ಲ ಎಂದು ಹಿಂಡಸಗೇರಿ ಬೇಸರ ವ್ಯಕ್ತಪಡಿಸಿದರು.
ಕೆಲವು ಕಡೆ ಒಂದು ಸಣ್ಣವಾಹನ ಸಂಚರಿಸಲು ಆಗದಂತಹ ಇಕ್ಕಟ್ಟದ ರಸ್ತೆಗಳಿವೆ. ಅಂತಹ ಕಡೆ ಕಾರ್ಯಾಚರಣೆ ನಡೆಯುವುದಿಲ್ಲ. ರಸ್ತೆ ಬಿಟ್ಟು ದೂರ ಇರುವ ದರ್ಗಾ ತೆರವಿಗೆ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಹಿಂಡಸಗೇರಿ ಆರೋಪಿಸಿದರು.