ದರ್ಗಾ ತೆರವು ಅನಿವಾರ್ಯ: ವೈಯಕ್ತಿಕವಾಗಿ ಬೇಸರವಿದೆ

CM VISIT
Advertisement

ಹುಬ್ಬಳ್ಳಿ ಧಾರವಾಡ ನಡುವಿನ ಬಿ ಆರ್ ಟಿ ಎಸ್ ಕಾರಿಡಾರ್ ನಲ್ಲಿ 13 ವಿವಿಧ ಧಾರ್ಮಿಕ ಕೇಂದ್ರಗಳನ್ನ ತೆರವು ಮಾಡಲಾಗಿದೆ. ಇದೀಗ ದರ್ಗಾ ತೆರವು ಮಾಡಲಾಗಿದೆ. ಕೆಲವೊಮ್ಮೆ ಇಂತಹ ತೆರುವ ಕಾರ್ಯಾಚರಣೆ ಅನಿವಾರ್ಯ. ದರ್ಗಾ ತೆರವು ಮಾಡೋದಕ್ಕೆ ನನಗೂ ವೈಯಕ್ತಿಕವಾಗಿ ಬೇಸರವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ದರ್ಗಾಕ್ಕೆ ಶುಕ್ರವಾರ ಸಂಜೆ‌ ಭೇಟಿಯ ನಂತರ ಮಾತನಾಡಿದ ಅವರು, ದರ್ಗಾ ತೆರವು ಅನಿವಾರ್ಯವಾಗಿವಾಗಿತ್ತು. ಸದ್ಯ ದರ್ಗಾ ಮತ್ತು ಗೋರಿ ತೆರವು ಮಾಡಲಾಗಿದೆ. ನಗರ ಪ್ರದೇಶ ಬೆಳೆದಂತೆಲ್ಲ ಅಭಿವೃದ್ಧಿ ಕಾರ್ಯ ಅನಿವಾರ್ಯ. ದರ್ಗಾ ತೆರವಿನ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
ಮಸೀದಿ ಮರು ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುತ್ತೇನೆ. ಬಿ ಆರ್ ಟಿ ಎಸ್ ಕಾರಿಡಾರ್ ನಲ್ಲಿಯೇ ಮತ್ತಷ್ಟು ಧಾರ್ಮಿಕ ಕೇಂದ್ರ ತೆರವು ಮಾಡಬೇಕಿದೆ. ಅದನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು.ದರ್ಗಾ ತೆರವಿನ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ವಿಚಾರ ಇದಕ್ಕೆ ಪ್ರತಿಕ್ರಿಯಿಸದೆ ಹೊರಟು ಹೋದರು.