ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ ಮಧ್ಯಮ ವರ್ಗಕ್ಕೆ ಜಾಕ್‌ಪಾಟ್ ನೀಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, 3 ಲಕ್ಷದವರೆಗೆ ಯಾವುದೇ ತೆರಿಗೆ ಇರಲ್ಲ. ಅಲ್ಲದೇ ಸೇವಾ ಸುಂಕದಲ್ಲಿ 37% ದಿಂದ 27% ವರೆಗೆ ಇಳಿಕೆ ಮಾಡಲಾಗಿದೆ.
3ರಿಂದ 6 ಲಕ್ಷದ ವರೆಗೆ 5% ತೆರಿಗೆ, 6 ರಿಂದ 9 ಲಕ್ಷದ ವರೆಗೆ 10%, 9ರಿಂದ 12 ಲಕ್ಷದ ವರೆಗೆ 15% 12ರಿಂದ 15 ಲಕ್ಷದ ವರೆಗೆ 20% ಹಾಗೂ 15 ಲಕ್ಷ ಮೇಲ್ಪಟ್ಟ 30% ತೆರಿಗೆ ವಿಧಿಸಲಾಗಿದೆ.