ಬಾಗಲಕೋಟೆ: ನವನಗರದ ಜಿಲ್ಲಾಡಳಿತ ಭವನಕ್ಕೆ ಸಾಗುವ ಮಾರ್ಗ, ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪಕ್ಕದಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಅದು ಅಧಿಕಾರಿಗಳ ಗಮನಕ್ಕೆ ಬಂದಂತ್ತಿಲ್ಲ. ಬಂದಿದ್ದರೂ ಅದರ ತೆರುವಿಗೆ ಗಮನಹರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಲಯ ಸಂಕೀರ್ಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳುವ ಮಾರ್ಗದ ಶ್ರೀಅಯ್ಯಪ್ಪಸ್ವಾಮಿ ದೇಗುಲದ ಆವರಣಕ್ಕೆ ಹೊಂದಿಕೊಂಡು ಮುಖ್ಯರಸ್ತೆಯಲ್ಲೇ ಈ ಫಲಕ ರಾರಾಜಿಸುತ್ತಿದೆ. ಫಲಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿದ್ದು, ಉಪ್ಪಾರ ಸಮಾಜಕ್ಕೆ ಬೊಮ್ಮಾಯಿ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಲಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಓಡಾಡುತ್ತಿದ್ದರೂ ಫಲಕ ತೆರವುಗೊಳ್ಳದಿರುವುದು ಏಕೆ ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.