ತುರ್ತು ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು

Advertisement

ದೆಹಲಿ: ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅಸ್ವಸ್ಥಗೊಂಡಿದ್ದು, ಅವರಿಗೆ ದೆಹಲಿಯ ಇಂದ್ರಪ್ರಸ್ತ ಅಪೋಲೋ ಆಸ್ಪತ್ರೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.
ಮಾರ್ಚ್‌ 14ರಂದು ದೆಹಲಿಗೆ ಬಂದಿದ್ದ ಸದ್ಗುರು ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಆದರೂ ಅವರು ದೆಹಲಿಯ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮ ರದ್ದುಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಎರಡು ದಿನದ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಿಶಕ್ತಿ, ಎಡ ಗಾಲಿನಲ್ಲಿ ನೋವು ಹಾಗೂ ವಾಂತಿ, ತಲೆನೋವಿನ ಪ್ರಮಾಣ ಅಧಿಕವಾಗಿರುವುದಾಗಿ ತಿಳಿಸಿದ್ದರು. ಆನಂತರ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವ ತಡೆಗಟ್ಟಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಕುರಿತಂತೆ ಸದ್ಗುರು ಮಾತನಾಡಿದ್ದು, “ಅಪೋಲೋ ಆಸ್ಪತ್ರೆಯ ನರರೋಗ ತಜ್ಞರು ನನ್ನ ತಲೆ ಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಎಲ್ಲವೂ ಖಾಲಿಯಿದೆ. ನಾನು ದೆಹಲಿಯಲ್ಲಿದ್ದೇನೆ. ಇಲ್ಲಿ ನನ್ನ ತಲೆ ಬುರುಡೆಯನ್ನು ಸರಿಪಡಿಸಿದ್ದಾರೆ. ಏನೂ ಹಾನಿಯಾಗಿಲ್ಲ” ಎಂದು ಲಘು ಹಾಸ್ಯದಾಟಿಯಲ್ಲಿ ಅವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.