ಬಾಗಲಕೋಟೆ(ಇಳಕಲ್): ಈ ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಗೆ ನಗರದ ಸುತ್ತ ಮುತ್ತ ಇರುವ ಜಲಪಾತಗಳು ತುಂಬಿ ತುಳುಕುತ್ತಿವೆ.
ನಗರದಿಂದ ಕೇವಲ ೧೪ ಕಿಮಿ ದೂರದಲ್ಲಿ ಇರುವ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಸದ್ಯ ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗರೆಯುತ್ತಾ ಸುರಿಯುತ್ತಿರುವ ದೃಶ್ಯಗಳನ್ನು ನೋಡಲು ನಗರದ ಯುವ ಜನತೆ ಕಬ್ಬರಗಿ ಗ್ರಾಮದತ್ತ ದಾಂಗುಡಿ ಇಟ್ಟಿದೆ.
ಮಿನಿ ಜಲಪಾತದ ನಯನ ಮನೋಹರ ಚಿತ್ರವನ್ನು ನಗರದ ಗೋಪಾಲ ದೇಶಪಾಂಡೆ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ