ತಿರುಪತಿಗೆ ಹೊರಟಿದ್ದ ಕಾರು ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

Advertisement

ಹಾವೇರಿ: ತಿರುಪತಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ಪಲ್ಟಿಯಾಗಿ ಒಂದೇ ಕುಟುಂಬ ನಾಲ್ವರು ಸ್ಥಳದಲ್ಲಿ ಮೃತಪಟ್ಟು, ಆರು ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ರಾಣೆಬೆನ್ನೂರ ತಾಲೂಕಿನ ಹಲಗೇರಿ ಕ್ರಾಸ್ ಬೈಪಾಸ್ ಬಳಿ ಇಂದು ನಸುಕಿನ ಜಾವ ನಡೆದಿದೆ.
ಹಾವೇರಿ ಅಶ್ವಿನಿ ನಗರದ ನಿವಾಸಿಗಳಾದ ಸುರೇಶ ವೀರಪ್ಪ ಜಾಡಿ(45), ಐಶ್ವರ್ಯ ಈರಪ್ಪ ಬಾರ್ಕಿ(22), ಚೇತನಾ ಸಮಂಗಡಿ, ಪವಿತ್ರಾ ಪ್ರಭುರಾಜ ಸಮಂಗಡಿ(28) ಸೇರಿ ನಾಲ್ವರು ಮೃತಪಟ್ಟರು,ಕಾರಿನಲ್ಲಿದ್ದ ಚನ್ನವೀರಪ್ಪ ಜಾಡಿ,ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ನೀಲಪ್ಪ ಬಾರ್ಕಿ, ಗೀತಾ ಹೊನ್ನಪ್ಪ ಬಾರ್ಕಿ ಸೇರಿ ಆರು ಜನ ಗಾಯಗೊಂಡಿದ್ದಾರೆ. ಇವರು ದೇವರ ದರ್ಶನಕ್ಕೆಂದು ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ, ಗಾಯಾಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು FSL ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಕುರಿತು ರಾಣೆಬೆನ್ನೂರ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ