ತಾರಕಕ್ಕೇರಿದ ವಕೀಲರು-ಖಾಕಿ ಸಂಘರ್ಷ

ವಕೀಲರು
Advertisement

ಬೆಳಗಾವಿ: ಮಹಿಳಾ ವಕೀಲರ ಮೇಲೆ ಪೊಲೀಸರು ನಡೆಸಿದರೆನ್ನಲಾದ ಹಲ್ಲೆ ಪ್ರಕರಣ ತಾರಕ್ಕೇರುವ ಸಾಧ್ಯತೆಗಳು ಹೆಚ್ಚಾಗಿವೆ.
ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ನೂರಾರು ವಕೀಲರು ಪ್ರತಿಭಟನೆ ನಡೆಸಿದರೂ ಪೊಲೀಸ್ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಾಲಹರಣ ಮಾಡಿದರು. ಪೊಲೀಸ್ ಆಯುಕ್ತರ ಕಚೇರಿ ಹೊರಗೆ ಸುಮಾರು ನಾಲ್ಕು ತಾಸು ವಕೀಲರು ಧಿಕ್ಕಾರ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಕೊನೆಗೆ ರಾತ್ರಿ‌ 8 ಕ್ಕೆ ಪ್ರತಿಭಟನಾ ನಿರತ ವಕೀಲರು ಅಧ್ಯಕ್ಷ ಪ್ರಭು ಯತ್ನಟ್ಟಿ ನೇತೃತ್ವದಲ್ಲಿ ಡಿಸಿಪಿ ಕೊಠಡಿಗೆ ನುಗ್ಗಿದರು.‌ ಈ ಸಂದರ್ಭದಲ್ಲಿ ವಕೀಲರು ಅಲ್ಲಿ ಹಾಜರಿದ್ದ ಡಿಸಿಪಿ ಸ್ನೇಹಾ ಅವರೊಂದಿಗೆ ವಾದ ವಿವಾದ ನಡೆಸಿದರು. ಕೊನೆಗೆ ತಪ್ಪಿತಸ್ಥ ಪೊಲೀಸ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳಬೆಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಬರುವ ಸೋಮವಾರ ವಕೀಲರ ಸಭೆ ನಡೆಸಿ ಕೋರ್ಟ ಕಲಾಪ ಬಹಿಷ್ಕಾರ ಸೇರಿದಂತೆ ರಾಜ್ಯವ್ಯಾಪಿ ಹೋರಾಟ ಮಾಡುವ ತೀರ್ಮಾನ‌ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಯತ್ನಟ್ಟಿ ತಿಳಿಸಿದರು.