ದಾವಣಗೆರೆ : ಹೊನ್ನಾಳಿಯಲ್ಲಿ ಹಾಲಿ-ಮಾಜಿ MLA ವಾರ್ ಜೋರಾಗಿದ್ದು, ರೇಣುಕಾಚಾರ್ಯ- ಶಾಂತನಗೌಡ ನಡುವೆ ಮಾತಿನ ಯುದ್ಧ ನಡೆದಿದೆ.
ಮಾಜಿ-ಹಾಲಿಗಳ ಜಗಳದ ವಿಡಿಯೋ ಭಾರೀ ವೈರಲ್ ಆಗಿದ್ದು, ತಹಶೀಲ್ದಾರ್ ಎದುರೇ ರೇಣುಕಾ-ಶಾಂತನಗೌಡ ಬೈದಾಡಿಕೊಂಡಿದ್ದಾರೆ. ಮಳೆಗೆ ಕುಸಿದ ಮನೆಗಳ ಪರಿಹಾರ ವಿಚಾರವಾಗಿ ಜಗಳ ನಡೆದಿದ್ದು, ಉದ್ದೇಶ ಪೂರ್ವಕವಾಗಿಯೇ ಕೆಲವರಿಗೆ ಪರಿಹಾರ ಕೊಡ್ತಿಲ್ಲ, ಪರಿಹಾರದಲ್ಲೂ ರಾಜಕೀಯ ಎಂದು ಶಾಂತನಗೌಡ ಆರೋಪ ಮಾಡಿದ್ದಾರೆ. ತಹಶೀಲ್ದಾರ್ ಎದುರೇ ಮಾಜಿ MLA ಅವಾಚ್ಯ ಶಬ್ದ ಬಳಸಿದ್ದಾರೆ. ಶಾಸಕ ರೇಣುಕಾಚಾರ್ಯ ಬೆಂಬಲಿಗರಿಂದ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಹಶೀಲ್ದಾರ್ ಕಚೇರಿಯಲ್ಲಿ ವಾಗ್ವಾದ ನಡೆದಿದೆ.