ಸುಬ್ರಹ್ಮಣ್ಯ: ತಮಿಳು ಭಾಷೆಯ ಚಿತ್ರನಟ ವಿಶಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಟ ವಿಶಾಲ್ ಶುಕ್ರವಾರ ರಾತ್ರಿ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ದೇವರ ಸಂಜೆಯ ಮಹಾಪೂಜೆ ಹಾಗೂ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವದಲ್ಲಿ ಪಾಲ್ಗೊಂಡರು.
ಶುಕ್ರವಾರ ರಾತ್ರಿ ಕ್ಷೇತ್ರದಲ್ಲಿ ತಂಗಿದ್ದ ನಟ ವಿಶಾಲ್ ಶನಿವಾರ ಮುಂಜಾನೆ ಆಶ್ಲೇಷ ಬಲಿ ಹಾಗೂ ಮಧ್ಯಾಹ್ನದ ಮಹಾಪೂಜೆ ಸೇವೆ ನೆರವೇರಿಸಿದರು. ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಅವರು ಶುಕ್ರವಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದರು.