ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬುದು ಹಳೆಯ ಗಾದೆ. ಈಗ ಮಕ್ಕಳು ಬಾಲ ಮಂದಿರಕ್ಕೆ ಸೇರುವಂತಾಗಿದೆ. ಇತ್ತೀಚೆಗೆ ವಿವಾಹ ವಿಚ್ಛೇಧನ ಸಂಖ್ಯೆ ಅಧಿಕಗೊಳ್ಳುತ್ತಿದೆ. 22 ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಕೇವಲ 2 ಕೌಟುಂಬಿಕ ನ್ಯಾಯಾಲಯವಿತ್ತು. ಈಗ ಅದು ಮೂರು ಪಟ್ಟು ಅಧಿಕಗೊಂಡಿದೆ. ಹಿಂದೆ ಕುಟುಂಬಗಳಲ್ಲಿ ಅಸಮಾಧಾನ- ಜಗಳ ಇದ್ದೇ ಇರುತ್ತಿತ್ತು. ಆದರೆ, ಅದು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಯುತ್ತಿವು. ಈಗ ಬಹುತೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಅದರಲ್ಲೂ ಇಬ್ಬರ ಒಪ್ಪಿಗೆ ಮೇಲೆ ವಿಚ್ಛೇದನ ಪಡೆಯುವವರ ಸಂಖ್ಯೆ ಅಧಿಕಗೊಳ್ಳುತ್ತಿದ್ದು ಇದರಿಂದ ಮಕ್ಕಳು ಬಾಲ ಮಂದಿರ ಸೇರುವುದು ಅಧಿಕಗೊಳ್ಳುತ್ತಿದೆ ಎಂಬ ಸಮೀಕ್ಷೆ ವರದಿ ಅತಂಕ ಮೂಡಿದೆ. ನಮ್ಮ ದೇಶದಲ್ಲಿ ಮಾತ್ರ ಕುಟುಂಬದ ಕಲ್ಪನೆ ಉಳಿದುಕೊಂಡಿದೆ. ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವು. ಮೂರು-ನಾಲ್ಕು ತಲೆಮಾರಿನ ಜನ ಒಟ್ಟಿಗೆ ಬದುಕುತ್ತಿರು. ನಗರೀಕರಣ ಅಧಿಕಗೊಂಡ ಮೇಲೆ ಸರ್ಕಾರ ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ಇರುವುದೇ ಚಿಕ್ಕ ಸಂಸಾರ ಎಂದು ಪ್ರತಿಪಾದಿಸಿರಿಂದ ಅವಿಭಕ್ತ ಕುಟುಂಬಗಳು ನಶಿಸಿಹೋದವು. ಆಗ ಕಿರಿಯರು ಹಿರಿಯರು ಹೇಳಿನ್ನು ಕೇಳುತ್ತಿರು. ವಿವಾಹ ಸಂಬಂಧ ಕಡಿದು ಹೋಗಲು ಅವಕಾಶ ನೀಡುತ್ತಿರಲಿಲ್ಲ.
ಈಗ ಗಂಡ-ಹೆಂಡತಿ ಇಬ್ಬರೂ ದುಡಿಯುವುದರಿಂದ ಇಬ್ಬರಿಗೂ ಆರ್ಥಿಕ ಸ್ವಾತಂತ್ರ‍್ಯ ಲಭಿಸಿದೆ. ಇದರೊಂದಿಗೆ ಸ್ವಪ್ರತಿಷ್ಠೆಯೂ ಸಾಕಷ್ಟು ಇರುತ್ತದೆ. ಹೀಗಾಗಿ ಯಾವುದಕ್ಕೂ ರಾಜಿಯಾಗದ ಮನಸ್ಸುಗಳು ವಿವಾಹ ಬಂಧನದಿಂದ ಹೊರಬರಲು ಹಾತೊರೆಯುತ್ತವೆ. ಕೊರೊನಾ ಕಾಲದಲ್ಲಿ ವಿಚ್ಛೇದನಗಳು ಕಡಿಮೆಯಾಗಿವು. ಆದರೆ, ಕೊರೊನಾ ರೋಗಕ್ಕೆ ತಂದೆತಾಯಿ ಇಬ್ಬರೂ ಬಲಿಯಾಗಿ ಮಕ್ಕಳು ಅನಾಥರಾದಾಗ ಅವರು ಬಾಲ ಮಂದಿರ ಸೇರುವುದು ಅಧಿಕಗೊಂಡಿತು. ಸರ್ಕಾರ ಕೊರೊನಾದಿಂದ ಸತ್ತ ತಂದೆತಾಯಿಯ ಮಕ್ಕಳಿಗೆ ಪರಿಹಾರ ನೀಡಲು ಮುಂದೆ ಬಂದಾಗ ಅವರನ್ನು ದತ್ತು ತೆಗೆದುಕೊಳ್ಳಲು ಹಲವರು ಮುಂದೆ ಬಂದರು. ಅವರ ಉದ್ದೇಶ ಏನು ಎಂಬುದು ಬಹಿರಂಗಗೊಂಡಾಗ ಸರ್ಕಾರ ಅವಕಾಶ ನೀಡಲಿಲ್ಲ. ನಾವು ರಿಮ್ಯಾಂಡ್ ಹೋಂ ನಿರ್ಮಿಸಿರುವುದು ಬಾಲ ಅಪರಾಧಿಗಳಿಗೆ ಮಾತ್ರ. ಅವರನ್ನು ಜೈಲಿಗೆ ಹಾಕಲು ಬರುವುದಿಲ್ಲ. ಅದಕ್ಕಾಗಿ ಬಾಲ ಮಂದಿರ ನಿರ್ಮಿಸಲಾಯಿತು. ಈಗ ತಂದೆ ತಾಯಿ ಜಗಳದಿಂದ ಬಾಲ ಮಂದಿರ ಸೇರಿದ ಮಕ್ಕಳು ಅವರೊಂದಿಗೆ ಬೆಳೆಯಬೇಕಾಗಿ ಬಂದಿದೆ. ಕರ್ನಾಟಕದಲ್ಲಿರುವ ಬಾಲ ಮಂದಿರಗಳಲ್ಲಿ ತಂದೆ ತಾಯಿ ವಿವಾಹ ವಿಚ್ಛೇದನದಿಂದ ಬಂದು ಸೇರಿದ ಮಕ್ಕಳ ಸಂಖ್ಯೆ 7 ತಿಂಗಳಲ್ಲಿ 382 ಆಗಿದೆ ಎಂದು ಸಮೀಕ್ಷೆ ತಿಳಿಸಿದೆ. ವಿಚ್ಛೇದನ ಪಡೆಯುವ ಮುನ್ನ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವುದು ಅಗತ್ಯ. ತಂದೆತಾಯಿ ವೈವಾಹಿಕ ಸಂಬಂಧ ಉತ್ತಮವಾಗಿರೆ ಮಕ್ಕಳೂ ಉತ್ತಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪ್ರೀತಿ ವಿಶ್ವಾಸದ ಬೆಲೆ ಏನು ಎಂಬುದು ತಿಳಿದಿರುತ್ತದೆ. ತಂದೆ ತಾಯಿಗಳೇ ಅದಕ್ಕೆ ಬೆಲೆ ಕೊಡುವುದಿಲ್ಲ ಎಂದಾದಲ್ಲಿ ಮಕ್ಕಳೂ ಅವರ ಹಾದಿಯನ್ನೇ ಹಿಡಿಯುತ್ತಾರೆ. ಇವರು ಸಮಾಜಕ್ಕೆ ಹೊರೆಯಾಗುತ್ತಾರೆ. ಈ ಮಕ್ಕಳಲ್ಲಿ ಕೆಲವರು ಮಾತ್ರ ಹಟದಿಂದ ಓದಿ ಉತ್ತಮ ವೃತ್ತಿಯನ್ನು ಕೈಗೊಂಡು ಇತರರಿಗೆ ಮಾದರಿಯಾಗುವುದುಂಟು. ಮನೆಯ ವಾತಾವರಣ, ಉತ್ತಮ ಶಿಕ್ಷಣ ಪರಿಸರ ಯಾವುದೇ ಮಗುವನ್ನಾದರೂ ಉತ್ತಮ ಪ್ರಜೆ ಮಾಡುವುದು ನಿಶ್ಚಿತ. ಇದನ್ನು ಎಲ್ಲ ಮನೋವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕಾಗಿಯೇ ಕಲ್ಯಾಣ ಸಮಾಜ ಬೇಕು ಎಂದು ಎಲ್ಲರೂ ಬಯಸುತ್ತಾರೆ. ಯುದ್ಧ ಎಂಬುದು ಇಡೀ ಸಮುದಾಯದ ಬದುಕಿನ ಮೇಲೆ ಕರಾಳ ಛಾಯೆ ಬೀರುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಉತ್ತಮ ಮಕ್ಕಳು ಅಧಿಕಗೊಳ್ಳಬೇಕು ಎಂದರೆ ಅವರ ತಂದೆ-ತಾಯಿಗಳು ಸುಸಂಸ್ಕೃತರಾಗಿ ಉತ್ತಮ ಜೀವನ ನಡೆಸಬೇಕು. ಆಗ ಮಕ್ಕಳು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಾರೆ. ಸಮಾಜದಲ್ಲಿ ಬಾಲ ಮಂದಿರಗಳ ಸಂಖ್ಯೆ ಅಧಿಕಗೊಳ್ಳಬಾರದು. ಎಲ್ಲ ಮಕ್ಕಳು ಸಹಜವಾಗಿ ಇತರರೊಂದಿಗೆ ಬೆರೆತು ಸಂತೋಷದಿಂದ ಬೆಳೆಯ ಬೇಕು. ಆಗ ಸಮಾಜಕ್ಕೆ ಆ ಮಕ್ಕಳಿಂದ ಉಪಕಾರ ಹೆಚ್ಚಾಗುತ್ತದೆ. ಯುವ ಜನಾಂಗ ದೇಶದ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದಲ್ಲಿ ಅವರು ಸಹಜ ಪರಿಸರದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಎಲ್ಲ ಸವಲತ್ತು ಕಲ್ಪಿಸಿಕೊಡಬೇಕು. ಇತ್ತೀಚೆಗೆ ಸಾಮಾಜಿಕ ಜಾಲ ಬಂದ ಮೇಲೆ ಒಳ್ಳೆಯದು-ಕೆಟ್ಟದು ಎರಡೂ ಆಗಿದೆ. ಹಿಂದೆ ತಾಯಂದಿರ ದಿನ, ತಂದೆಯರ ದಿನಗಳಿಗೆ ಬೆಲೆ ಇರಲಿಲ್ಲ. ಈಗ ಕಡು ಬಡವರು ಇದನ್ನು ಆಚರಿಸಲು ಬಯಸುತ್ತಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ಎಂಬುದರಲ್ಲಿ ಸಂದೇಹವಿಲ್ಲ.
ಇದರಿಂದ ಕುಟುಂಬದಲ್ಲಿ ಸಣ್ಣಪುಟ್ಟ ಅಸಮಾಧಾನಗಳು ನಿವಾರಣೆಯಾಗುತ್ತಿವೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಿಂದ ಕುಟುಂಬಗಳು ಒಡೆದು ಹೋದ ಘಟನೆಗಳಿವೆ. ಯಾರೇ ಆಗಲಿ ವಿಚ್ಛೇದನ ಪಡೆಯುವ ಮುನ್ನ ತಮ್ಮ ಮಕ್ಕಳ ಬಗ್ಗೆ ಚಿಂತಿಸಿದರೆ ಸಾಕು. ಪರಿಹಾರ ಗೋಚರವಾಗುತ್ತದೆ. ಸಾಮಾಜಿಕ ಜಾಲತಾಣಗಳು ನಮ್ಮ ವಯುಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುವಂತೆ ಆಗಬಾರದು.