ಬಾಗಲಕೋಟೆ: ಜಿಲ್ಲೆಯ ಮುಧೋಳದಲ್ಲಿ ಮಗ, ತಂದೆ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಕೊಳವೆಬಾವಿಯಲ್ಲಿ ತುರುಕಿದ ಪ್ರಕರಣ ಬೆಳಕಿಗೆ ಬಂದಿದೆ. ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರಾಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ. ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ. ಕುಡಿದು ಬಂದು ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಕುಳಲಿ ಅವರನ್ನು ಅವರ ಪುತ್ರ ವಿಠ್ಠಲ ಕುಳಲಿ ಡಿ.6 ರಂದು ಮಧ್ಯರಾತ್ರಿ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಪರಶುರಾಮ ಮೃತರಾಗಿದ್ದಾರೆ. ಶವವನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ ಹೂಳಲು ನೋಡಿದ್ದಾನೆ. ಹೊಳಿದರೆ ಸಿಕ್ಕಿ ಬೀಳಬಹುದು ಎಂದು ಪಾರ್ಥಿವ ಶರೀರವನ್ನು ತುಂಡು, ತುಂಡಾಗಿಸಿ ಕೊಳವೆ ಬಾವಿಯಲ್ಲಿ ತುರುಕಿದ್ದಾನೆ. ಪರುಶರಾಮ ಪತ್ನಿ, ಪತಿ ಕಾಣೆಯಾದ ಬಗ್ಗೆ ದೂರು ನೀಡಿದ ನಂತರ ಮಗನನ್ನು ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಸಿಪಿಐ ಅಯ್ಯನಗೌಡ ಪಾಟೀಲ ತಿಳಿಸಿದ್ದಾರೆ.