ಡ್ರಗ್, ಸ್ಯಾಂಡ್ ಮಾಫಿಯಾದ ಅಡಿಯಲ್ಲಿ ಕಾಂಗ್ರೆಸ್ ಬದುಕಿತ್ತು: ಕಟೀಲ್‌

ನಳೀನಕುಮಾರ ಕಟೀಲ್
Advertisement

ವಿಜಯಪುರ: ಡ್ರಗ್ ಮಾಫಿಯಾ ಮತ್ತು ಸ್ಯಾಂಡ್ ಮಾಫಿಯಾದ ಅಡಿಯಲ್ಲಿ ಕಾಂಗ್ರೆಸ್ ಬದುಕಿತ್ತು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮೇಡಂಗೆ ಹಣ ಕೊಟ್ಟಿದ್ದು ಇದೆ ಡ್ರಗ್ಸ್ ಮಾಫಿಯಾದಿಂದ ಸಂಗ್ರಹಿಸಿದ ಹಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನಕುಮಾರ ಕಟೀಲ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ಮಾಫಿಯಾ ಮತ್ತು ಸ್ಯಾಂಡ್ ಮಾಫಿಯಾದ ಹಣದಲ್ಲಿ ಮೇಡಂಗೆ ಕೊಟ್ಟರು. ಆದರೆ ಡ್ರಗ್ ಮಾಫಿಯಾನ ಕಂಟ್ರೋಲ್ ಮಾಡಿದ್ದು ಯಡ್ಡಿಯೂರಪ್ಪ ಸರ್ಕಾರ. ಸ್ಯಾಂಡ್ ಮಾಫಿಯಾ ತಡೆಯಲು ಮರಳು ನೀತಿಯನ್ನ ತರುತ್ತಿದ್ದೇವೆ. ಅದರ ಪ್ರಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಒಂದು ಪೇಸಿಎಂ ಸಿದ್ದರಾಮಯ್ಯ, ಇನ್ನೊಂದು ” ಪೇ ಕಾಂಗ್ರೆಸ್ ಮೇಡಂ” ಪೇಮೆಂಟ್ ಮಾಡಿದ ಸಿಎಂ. ಪೇಸಿಎಂ ಕಾನ್ಸೆಪ್ಟ್ ಹಿಂದೆ ಡಿ.ಕೆ .ಶಿವಕುಮಾರ್ ಇದ್ದಾರೆ. ಪೇಸಿಎಂ ಪೋಸ್ಟರ್ ಹಚ್ಚಿಸೋ ಮೂಲಕ ಸಿದ್ದರಾಮಯ್ಯರನ್ನು ಇಕಟ್ಟಿಗೆ ಸಿಲುಕಿಸಿದ್ದಾರೆ. ಇದು ಡಿಕೆಶಿ ಬುದ್ಧಿವಂತಿಕೆ ಎಂದು ಕುಟುಕಿದರು.