ಡೆನ್ಮಾರ್ಕ್‌ ಪ್ರಶಸ್ತಿ ಪಡೆದ ಕರುನಾಡಿನ ಜ್ಯೋತ್ಸ್ನಾ

ಮಂಗಳೂರು
Advertisement


ಮಂಗಳೂರು: ಡೆನ್ಮಾರ್ಕ್‌ನ ಅತೀ ಪ್ರತಿಭಾವಂತ ಯುವ ಸಲಹೆಗಾರ ಪ್ರಶಸ್ತಿಗಾಗಿ ೫ ಅಂತಿಮ ಸ್ಪರ್ಧಿಗಳ ಪಟ್ಟಿಯಲ್ಲಿದ್ದ ಮಂಗಳೂರಿನ ಜ್ಯೋತ್ಸ್ನಾ ಅಮೃತ್ ಪ್ರಶಸ್ತಿ ಗೆದ್ದಿದ್ದಾರೆ.
ಡೆನ್ಮಾರ್ಕ್‌ನ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್- ಎಫ್‌ಆರ್‌ಐ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿ ನೀಡುತ್ತಿದ್ದು, ಅಂತಿಮ ಪಟ್ಟಿಗೆ ಈಗ ಐವರು ಸಾಧಕರನ್ನು ಆಯ್ಕೆ ಮಾಡಲಾಗಿತ್ತು, ಈ ಐವರಲ್ಲಿ ಮಂಗಳೂರಿನ ಸಾಧಕಿ ಜೋತ್ಸ್ನಾ ಕೂಡ ಸೇರಿದ್ದು, ಮಾ.೨ರಂದು ಈ ಐವರಲ್ಲಿ ಒಬ್ಬರನ್ನು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿ ಜ್ಯೋತ್ಸ್ನಾ ಪ್ರಶಸ್ತಿ ಪಡೆದಿದ್ದಾರೆ.
ಕಾಪೆನ್‌ ಹಾಗೇನ್‌ನ ರೈಲ್ವೆ ವಿಭಾಗದಲ್ಲಿ ಪ್ರಾಜೆಕ್ಟ್‌ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜ್ಯೋತ್ಸ್ನಾ ಜಗತ್ತಿನ ಹಲವಾರು ರೈಲು ಯೋಜನೆಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿ ಗಮನ ಸೆಳೆದಿದ್ದಾರೆ. ಬರ್ಗೆನ್‌ನಲ್ಲಿರುವ ರೈಲು ವಿಸ್ತರಣೆ ಯೋಜನೆ ಮತ್ತು ಇಂಡೋನೇಷಿಯಾದ ಜಕಾರ್ತಾದಲ್ಲಿ ‘ಜಕಾರ್ತಾ ಮಾಸ್ ರ‍್ಯಾಪಿಡ್ ಟ್ರಾನ್ಸಿಟ್’ ರೈಲು ಯೋಜನೆಯಲ್ಲಿ ಜೋತ್ಸ್ನಾ ಮಾಡಿರುವ ಗಮನಾರ್ಹ ಕಾರ್ಯಗಳಿಗಾಗಿ ಈ ಪ್ರಶಸ್ತಿ ಸಂದಿದೆ. ಪ್ರಸ್ತುತ ೩೪ ವರ್ಷದ ಜ್ಯೋತ್ಸ್ನಾ ಅಮೃತ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದೇಶದ ನೌಕಾಪಡೆಯ ತುಕಡಿಯನ್ನು ಮುನ್ನಡೆಸಿದ ದಿಶಾ ಅಮೃತ್ ಅವರ ಸಹೋದರಿ. ಇವರು ಮೂಲತಃ ಮಂಗಳೂರು ಬೋಳೂರು ತಿಲಕ ನಗರ ನಿವಾಸಿ, ಅಮೃತ್ ಲೀಲಾ ದಂಪತಿಗಳ ಪುತ್ರಿ.