ಹುಬ್ಬಳ್ಳಿ: ಡಿ.ಕೆ. ಸುರೇಶ ಅವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ. ಸುರೇಶ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, ದೇಶದಲ್ಲಿ ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಒಬ್ಬ ಜನಪ್ರತಿನಿಧಿಗಳು ಈ ರೀತಿ ಮಾತನಾಡಬಾರದು. ಭಾರತದ ಅಖಂಡತೆಯನ್ನ ಕಾಪಾಡುವುದಾಗಿ ಪ್ರಮಾಣ ವಚನ ತೆಗೆದುಕೊಂಡಿರುತ್ತಾರೆ. ಈ ರೀತಿ ರಾಷ್ಟ್ರ ಇಬ್ಬಾಗದ ಮಾತುಗಳನ್ನಾಡುವುದು ಖಂಡನೀಯ ಎಂದರು.