ಡಿಎಂಕೆ ಸಂತುಷ್ಟಗೊಳಿಸಲು ತಮಿಳುನಾಡಿಗೆ ನೀರು

ಪ್ರಲ್ಹಾದ್ ಜೋಶಿ
Advertisement

ದೆಹಲಿ: ಇಂಡಿಯಾ ಮೈತ್ರಿಕೂಟದ ಭಾಗಿಯಾಗುರುವ ಡಿಎಂಕೆಯನ್ನು ಸಂತುಷ್ಟಗೊಳಿಸಲು ಸಿದ್ದರಾಮಯ್ಯ ಸರ್ಕಾರ ನೀರು ಬಿಡುತ್ತಿದೆ. ಸುಖಾಸುಮ್ಮನೆ ಬಿಜೆಪಿ ಸಂಸದರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು
ಕಾವೇರಿ ನೀರಿನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾತಾಡಿದ ಅವರು, ಸೆಪ್ಟೆಂಬರ್ 13ರಂದು ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ 2,500 ಕ್ಯೂಸೆಕ್ ನೀರು ತಮಿಳುನಾಡುಗೆ ಹರಿಸಲು ಒಪ್ಪಿಕೊಂಡು ಈಗ ಸಭೆ ಕರೆದಿದೆ. ಇದರ ಅರ್ಥವೇನು? ಮಾಡೋದ್ದನ್ನೆಲ್ಲ ಮಾಡಿ ಸಂಸದರನ್ನು ದೂರುವುದು ಸರಿಯಲ್ಲ. ಬಿಜೆಪಿ ಸಂಸದರು ನಿಸ್ಸಂದೇಹವಾಗಿ ರಾಜ್ಯ ಸರ್ಕಾರದ ಜೊತೆ ಇದ್ದಾರೆ ಎಂದ ಅವರು ಕಾವೇರಿ ನೀರಿನ ವಿಚಾರವನ್ನು ಸಿಎಂ ಸಿದ್ದರಾಮಯ್ಯ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.