ಟ್ವೀಟರ್ ಬಳಕೆದಾರರು ಇನ್ನು ಮುಂದೆ ಯಾವುದೇ ಹಿಂಸಾತ್ಮಕ ಚಿತ್ರಗಳನ್ನು, ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳಬಾರದೆಂಬ ನೂತನ ನಿಯಮಗಳನ್ನು ಟ್ವೀಟರ್ ಇಂದು ಜಾರಿಗೆ ತಂದಿದೆ.
ಹಿಂಸಾಚಾರವನ್ನು ವೈಭವೀಕರಿಸುವುದು ಮತ್ತು ಹಿಂಸೆಯನ್ನು ಪ್ರಚೋದಿಸುವುದನ್ನು ನಿಷೇಧಿಸುತ್ತದೆ ಎಂದು ಕಂಪನಿಯು ತನ್ನ @TwitterSafety ಖಾತೆಯಿಂದ ಟ್ವೀಟ್ ಮಾಡಿದೆ. ಇದರೊಂದಿಗೆ ಇನ್ನೂ ಹಲವು ಮಾನದಂಡಗಳನ್ನು ಕಂಪನಿ ತಿಳಿಸಿದೆ.