ಟಿ 20 ವಿಶ್ವಕಪ್​​ನಲ್ಲಿ ಕೆಎಂಎಫ್​​ ನಂದಿನಿ ಲೋಗೋ

Advertisement

ಬೆಂಗಳೂರು: ಕನ್ನಡಿಗರ ಹೆಮ್ಮೆಯ ನಮ್ಮ ನಂದಿನಿ ಟಿ20 ತಂಡದ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಜರ್ಸಿಯ ಮೇಲೆ ರರಾಜಿಸಲಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ನಂದಿನಿ ಲಾಂಛನವಿರುವ ಟಿ20 ತಂಡದ ಜರ್ಸಿಯನ್ನು ಕ್ರಿಕೆಟ್ ಸ್ಕಾಟ್ಲೆಂಡ್ ಬುಧವಾರ ಜಂಟಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. 2024ರ T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುವುದಾಗಿ ಕೆಎಂಎಫ್ ಘೋಷಿಸಿತ್ತು. ಬುಧವಾರ ಕೆಎಂಎಫ್ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಎರಡೂ ತಂಡಗಳ ಆಟಗಾರರು ನಂದಿನಿ ಲಾಂಛನವಿರುವ ಜೆರ್ಸಿಯನ್ನು ವಾಸ್ತವಿಕವಾಗಿ ಪ್ರದರ್ಶಿಸಿದರು. ಅಮೆರಿಕ, ವೆಸ್ಟ್‌ಇಂಡೀಸ್‌ನಲ್ಲಿ ಜೂ.1ರಿಂದ 29ರವರೆಗೆ ನಡೆಯಲಿರುವ ಟಿ-20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕೆಎಂಎಫ್‌ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದೆ. ಈ ತಂಡಗಳ ಆಟಗಾರರ ಜೆರ್ಸಿಯಲ್ಲಿ ಬಲಗೈ ಆಟಗಾರನ ಎಡ ತೋಳಿನ ಮೇಲೆ ಮತ್ತು ಎಡಗೈ ಆಟಗಾರನ ಬಲ ತೋಳಿನ ಮೇಲೆ ಕೆಎಂಎಫ್‌ ಲಾಂಛನ ಇರಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಂದಿನಿ ಎಂದು ಬರೆದ ಲಾಂಛನ ಇದಾಗಿರಲಿದೆ ಎಂದಿದ್ದಾರೆ.