ಇಳಕಲ್: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಟಿಕೇಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬುಧವಾರದಂದು ಕೆಲವು ಬೆಂಬಲಿಗರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ ಅವರಿಗೆ ಟಿಕೇಟ್ ನೀಡಿರುವಲ್ಲಿ ಕೆಲವು ಕಾಣದ ಕೈಗಳ ಮೇಲಾಟ ನಡೆದ ಕಾರಣ ವೀಣಾ ಅವರಿಗೆ ಟಿಕೇಟ್ ತಪ್ಪಿದೆ ಕಾಂಗ್ರೆಸ್ ಹೈ ಕಮಾಂಡ್ ಕೂಡಲೇ ನಿರ್ಧಾರ ಬದಲಿಸಿ ವೀಣಾ ಅವರಿಗೆ ಟಿಕೇಟ್ ನೀಡಲೇಬೇಕು ಎಂದು ಚಳುವಳಿಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಸನಗೌಡ ಮೂಲಿಮನಿ , ಆನಂದ ಮೇಟಿ , ವಿರೇಶ ಪತ್ರಿ , ಮಲ್ಲು ಗೊರಬಾಳ ಶಿವು ಭದ್ರಣ್ಣನವರ, ಮೌಲಪ್ಪ ಬಂಡಿವಡ್ಡರ ಮತ್ತು ಮಹಿಳೆಯರು ಭಾಗವಹಿಸಿದ್ದರು ನಂತರ ರಸ್ತೆಯಲ್ಲಿ ಟೈಯರಿಗೆ ಬೆಂಕಿ ಹಚ್ಚಿ ಸುಟ್ಟು ತಮ್ಮ ಸಿಟ್ಟು ಹೊರ ಹಾಕಿದರು.