ಬಾಗಲಕೋಟೆ(ರಬಕವಿ-ಬನಹಟ್ಟಿ): ನನ್ನ ಬೆಂಬಲಿಗರ ಒತ್ತಾಯದಿಂದ ಈ ಭಾರಿ ಬಿಜೆಪಿಯಿಂದ ಕಣಕ್ಕಿಳಿಯಲಿಚ್ಚಿಸಿದ್ದೇನೆಂದು ಡಾ. ಎಂ.ಎಸ್. ದಾನಿಗೊಂಡ ಸ್ಪಷ್ಟಪಡಿಸಿದರು.
ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನೂರಾರು ಬಿಜೆಪಿ ಮುಖಂಡರ ಹಾಗು ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೇರದಾಳ ವಿಧಾನಸಭಾ ಕ್ಷೇತ್ರವಾದಾಗಿನಿಂದಲೂ ಹೊರಗಿನವರೇ ಕ್ಷೇತ್ರವನ್ನು ಆಳುತ್ತ ಟಾವೆಲ್ ಹಾಕುವ ಕ್ಷೇತ್ರವಾಗಿದೆ. ಸ್ವಕ್ಷೇತ್ರದಲ್ಲಿಯೇ ಸಶಕ್ತರಿದ್ದರೂ ಹೊರಗಿನವರು ಬಂದು ಕಣಕ್ಕಿಳಿಯುವ ಉದ್ದೇಶವೇನು. ಸಾಕಷ್ಟು ಜನ ಸಕ್ರೀಯ ಮುಖಂಡರು ಕ್ಷೇತ್ರದಲ್ಲಿರುವಾಗ ಅವರಿಗೇ ಹೈಕಮಾಂಡ್ ಮಣೆ ಹಾಕಬೇಕೆಂದು ದಾನಿಗೊಂಡ ಒತ್ತಾಯಿಸಿದರು.