ಟಕ್ಕರ್‌‌ ಕೊಟ್ಟು ಅಪಘಾತಪಡಿಸಿದ ವ್ಯಕ್ತಿಗೆ ಜೈಲು ಶಿಕ್ಷೆ

Advertisement

ಕುಷ್ಟಗಿ: ಟಕ್ಕರ್ ಕೊಟ್ಟು ಅಪಘಾತಪಡಿಸಿದ ಆರೋಪಿಗೆ ಇಲ್ಲಿನ ಪ್ರಧಾನ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 12 ತಿಂಗಳು ಸಾದಾ ಜೈಲು ವಾಸ ಹಾಗೂ ದಂಡ ವಿಧಿಸಿ ಆದೇಶಿಸಿದೆ
ಮೇ 15, 2015 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಆರೋಪಿ ವಸಂತಕುಮಾ‌ರ್ ತಂದೆ ರಾಜಶೇಖರ್ ನಾಯಕ್‌ ಎಂಬಾತ ತನ್ನ ಕಾರನ್ನು ಇಳಕಲ್‌ನಿಂದ ಕುಷ್ಟಗಿಗೆ ಬರುವಾಗ ಅತೀ ವೇಗವಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು, ಮುಂದೆ ಟಿವಿಎಸ್ ವಾಹನ ನಡೆಸಿಕೊಂಡು ಹೋಗುತ್ತಿದ್ದ ಶಂಕ್ರಪ್ಪ ಪರಸಪ್ಪ ರಾಗಿ ಎಂಬ ಸವಾರನಿಗೆ ನೀಲಪ್ಪ ಕುಂಬಾರರವರ ಹೊಲದ ಮುಂದೆ ವಿಭಜಕ ರಸ್ತೆಯ ಹತ್ತಿರ ಟಕ್ಕರ್ ಕೊಟ್ಟಿದ್ದರಿಂದ ಶಂಕ್ರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಹೀಗಾಗಿ ಕುಷ್ಟಗಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಯಲಯದ ನ್ಯಾಯಧೀಶರಾದ ಶಂಭುಲಿಂಗಯ್ಯ ಮೂಡಿಮಠರವರು, ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಐಪಿಸಿ ಕಲಂ: 279 ರ ಅಡಿಯಲ್ಲಿ 1,000 ರೂ. ದಂಡ ಮತ್ತು 6 ತಿಂಗಳೂ ಸಾದಾ ಕಾರಾಗೃಹವಾಸ ಹಾಗೂ ಕಲಂ: 304(ಎ)ರ ಅಡಿಯಲ್ಲಿ 10,000 ರೂ. ದಂಡ ಮತ್ತು 06 ತಿಂಗಳು ಸಾದಾ ಜೈಲು ಕಾರಾಗೃಹವಾಸ (ಒಟ್ಟು 12 ತಿಂಗಳು ಜೈಲು ಕಾರಾಗೃಹವಾಸ ಮತ್ತು 1,000 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ.
ಕುಷ್ಟಗಿ ಆರಕ್ಷಕ ವೃತ್ತ-ನಿರೀಕ್ಷಕರಾಗಿದ ಆರ್.ಎಸ್. ಉಜ್ಜನಕೊಪ್ಪ ಅವರು ಈ ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ರಾಯನಗೌಡ ಎಲ್. ಕುಷ್ಟಗಿ ವಿಚಾರಣೆ ನಡೆಸಿ ತಮ್ಮ ವಾದ ಮಂಡಿಸಿದ್ದರು. ಹೀಗಾಗಿ ಸೂಕ್ತ ತನಿಖೆ ನಡೆಸಿ ಆರೋಪಿಗೆ ದಂಡ ಮತ್ತು ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.