ಬೀದರ್: ಕಾನೂನುಬಾಹಿರವಾಗಿ ಹುಲಿ ಚರ್ಮ ಸಂಗ್ರಹಿಸಿಟ್ಟಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಸಂಗೋಳಗಿ ಗ್ರಾಮದ ಅಶೋಕ್ ಪಾಟೀಲ್(61) ಎಂಬುವವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೀದರ್ ಮತ್ತು ಕಲಬುರಗಿ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಅಶೋಕ್ ಪಾಟೀಲ್ ಮನೆಯ ಲಾಕರ್ನಲ್ಲಿ ಹುಲಿ ಚರ್ಮ ಇರುವುದನ್ನು ಒಪ್ಪಿಕೊಂಡು, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಾಲ್ಕು ಹುಲಿ ಚರ್ಮದ ತುಂಡುಗಳು ಮನೆಯಲ್ಲಿ ಸಿಕ್ಕಿವೆ. ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ