ಜಿಲ್ಲಾ ಪೊಲೀಸ್ ಸಾಧನೆ: ವರ್ಷದಲ್ಲೇ 17 ಕೋಟಿ ವಸ್ತು ಪತ್ತೆ..!

ಬೆಳಗಾವಿ
Advertisement

ಬೆಳಗಾವಿ‌: ಕಳೆದ ಡಿಸೆಂಬರವರೆಗೆ ಬೆಳಗಾವಿ ಜಿಲ್ಲಾ ಪೊಲೀಸರು201 ಪ್ರಕರಣ ಪತ್ತೆ ಮಾಡಿ ಒಟ್ಟು 17 ಕೋಟಿ ರೂ ಗಿಂತಲೂ ಅಧಿಕ ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಸಾಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಪೊಲೀಸ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ 324 ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡ ವಸ್ತುಗಳನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸುವ ಕೆಲಸವನ್ನು ಉತ್ತರ ವಲಯ ಐಜಿಪಿ ಸತೀಶಕುಮಾರ ಮತ್ತು ಎಸ್ಪಿ ಡಾ. ಸಂಜೀವ ಪಾಟೀಲರು ಮಾಡಿದರು.
ಬೆಳಗಾವಿಯ ಪೊಲೀಸ್ ಮೈದಾನದಲ್ಲಿ ಇಂದು ವಶಪಡಿಸಿಕೊಂಡ ವಸ್ತುಗಳ ಪ್ರದರ್ಶನ ಮಾಡಿದರು. 8 ಕಿಲೊ 369 ಗ್ರಾಂ ತೂಕದ 4,18,48,೦೦೦ ರೂ ಮೊತ್ತದ ಬಂಗಾರದ ಆಭರಣ, 7 ಕಿಲೋ 23 ಗ್ರಾಂ ತೂಕದ 4,91,6೦೦ ರೂ ಮೊತ್ತದ ಬೆಳ್ಳಿ ಆಭರಣ, 1 ಕೋಟಿ 24 ಲಕ್ಷ ರೂ60 ಸಾವಿರ ರೂ ಬೆಲೆ ಬಾಳುವ 250 ದ್ವಿಚಕ್ರವಾಹನ, 3 ಕೋಟಿ 99 ಲಕ್ಷ ರೂ ಬೆಲೆಬಾಳುವ 24 ನಾಲ್ಕು ಚಕ್ರ ವಾಹನಗಳು, 59 ಲಕ್ಷ ರು ಬೆಲೆಬಾಳುವ 100 ಕ್ಕೂ ಹೆಚ್ಚು ಮೊಬೈಲ್ ಇನ್ನಿತರ ವಸ್ತುಗಳು ಮತ್ತು 7 ಕೋಟಿ 47ಲಕ್ಷ 22 ಸಾವಿರದಾ 375 ರೂ ನಗದನ್ನು ಪೊಲೀಸರು ಪತ್ತೆ ಮಾಡಿದ್ದರು.