ಹುಬ್ಬಳ್ಳಿ : ಸೋಮವಾರ ರಾತ್ರಿ ಸುರಿದ ಮಳೆಗೆ ಜಲಾವೃತವಾದ ಹುಬ್ಬಳ್ಳಿ ತಾಲ್ಲೂಕು ಕಿರೇಸೂರು ಗ್ರಾಮಕ್ಕೆ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿದರು.
ಸಚಿವರು ಗ್ರಾಮಕ್ಕೆ ಧಾವಿಸುತ್ತಿದ್ದಂತೆಯೇ ಗ್ರಾಮಸ್ಥರು ಸಮಸ್ಯೆ ಹೇಳಿಕೊಳ್ಳಲು ಮುಗಿಬಿದ್ದರು.
ಪ್ಯಾಂಟ್ ಏರಿಸಿಕೊಂಡು ಗ್ರಾಮಸ್ಥರೊಂದಿಗೆ ಸಂಚರಿಸಿದ ಸಚಿವರು ಹಾದಿಯುದ್ದಕ್ಕೂ ಅವರ ಅಹವಾಲು ಆಲಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.
ತಹಶೀಲ್ದಾರ ಪ್ರಕಾಶ ನಾಶಿ ಸ್ಥಳದಲ್ಲಿದ್ದು ಮಾಹಿತಿ ನೀಡಿದರು.