ಮೈಸೂರು: ಜನವರಿ 4 ರಂದು ನಂಜನಗೂಡು ಬಂದ್‌ಗೆ ಕರೆ ನೀಡಲಾಗಿದೆ.
ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಗರೀಕರಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಶ್ರೀಕಂಠೇಶ್ವರನ ಭಕ್ತರು ನಂಜನಗೂಡು ಬಂದ್ ಗೆ ಕರೆ ನೀಡಿದ್ದಾರೆ. ಡಿ.26ರಂದು ಅಂಧಕಾಸುರ ಸಂಹಾರದ ಧಾರ್ಮಿಕ ಆಚರಣೆಯನ್ನು ನಡೆಸಲಾಗಿದ್ದು, ಈ ವೇಳೆ ಕಿಡಿಕೇಡಿಗಳು ಸಂಪ್ರದಾಯಕ್ಕೆ ಅಡ್ಡಿ ಪಡಿಸಿ, ನಂಜುಂಡೇಶ್ವರನ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ನಂಜುಂಡೇಶ್ವರನ ಉತ್ಸವ ವಿಗ್ರಹದ ಮೇಲೆ ಎಂಜಲು ನೀರು ಎರಚಿ ಕೋಟ್ಯಂತರ ಭಕ್ತರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಘಟನೆ ನಡೆದು 5 ದಿನ ಕಳೆದರು ಕಿಡಿಗೇಡಿಗಳನ್ನು ಬಂಧಿಸದೆ ಕಾಲಹರಣ ಮಾಡುತ್ತಿರುವ ಪೋಲಿಸ್ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರದ ಕ್ರಮವನ್ನು ಖಂಡಿಸಿ ನಂಜುಂಡೇಶ್ವರನ ಭಕ್ತರೆಲ್ಲ ಸೇರಿ ಜನವರಿ 4ರ ಗುರುವಾರ ಸ್ವಯಂ ಪ್ರೇರಿತವಾಗಿ ನಂಜನಗೂಡು ಬಂದ್ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಅನಿವಾರ್ಯತೆ ಬಂದಿದೆ ಎಂದರು.