ಜಗದೀಶ ಶೆಟ್ಟರ, ಚಿಕ್ಕನಗೌಡ್ರ ನನ್ನ ಸಂಪರ್ಕದಲ್ಲಿಲ್ಲ

ಸಿದ್ದು
Advertisement

ಹುಬ್ಬಳ್ಳಿ: ಕುಂದಗೋಳ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿಕ್ಕನಗೌಡರ್ ಮತ್ತು ಜಗದೀಶ ಶೆಟ್ಟರಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವುದರಿಂದ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರ ಶುದ್ಧ ಸುಳ್ಳು. ಹಾಗೇನಾದರೂ ಇದ್ದರೆ ಅವರು ನಮ್ಮನ್ನು ಸಂಪರ್ಕಿಸುತ್ತಿದ್ದರು. ಅದರೆ, ಈ ವಿಚಾರವಾಗಿ ಅವರು ನನ್ನೊಡನೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಲಕ್ಷ್ಣಣ ಸವದಿ ಕಾಂಗ್ರೆಸ್ ಪಕ್ಷ ಸೇರಿರೋದ್ರಿಂದ ನಮಗೂ ಅನುಕೂಲ ಆಗಲಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಸಹಾಯ ಆಗುತ್ತೆ. ಸವದಿ ಸೀನಿಯರ್ ಲೀಡರ್. ಅವರಿಗೆ ಬಿಜೆಪಿ ಅವಮಾನ ಮಾಡಿದೆ. ಹೀಗಾಗಿ, ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಪಟ್ಟಿ ಇವತ್ತು ಇಲ್ಲ ನಾಳೆ ಬಿಡುಗಡೆ ಆಗಬಹುದು ಎಂದರು.
ವಿಮಾಮ ನಿಲ್ದಾಣದಲ್ಲಿ ಸಿದ್ದು ಪರದಾಟ:
ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದರು. ಆದರೆ, ಹವಾಮಾನ ವೈಪರಿತ್ಯದಿಂದ ಸಿದ್ದು ಇದ್ದ ವಿಮಾನ ಹುಬ್ಬಳ್ಳಿಯಲ್ಲೇ ಲ್ಯಾಂಡ್ ಆಗಿದೆ. ಹವಾಮಾನ ಸರಿ ಆಗುವ ಸೂಚನೆ ಸಿಗುವ ವರೆಗೂ 20ನಿಮಿಷಗಳ ಕಾಲ ಹುಬ್ಬಳ್ಳಿಯ ನಿಲ್ದಾಣದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿ ಕುಳಿತಿದ್ದರು‌. ಮೋಡ ಸರಿಯದ ಕಾರಣ ಹುಬ್ಬಳ್ಳಿಯಿಂದ ರಸ್ತೆಯ ಮೂಲಕ ಯಮಕನಮರಡಿಯತ್ತ ಪ್ರಯಾಣ ಬೆಳೆಸಿದರು.