ಚಿತ್ರದುರ್ಗ: ಎಲ್ಲಾ ಕಡೆ ತಿರುಗಿ ಹಳೇ ಪಾದವೇ ಗತಿ ಎಂದು ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ. ಹಳೇ ಪಾದವೂ ಗತಿ ಇಲ್ಲ ಎಂದು ತೋರಿಸಿ ಕೊಡುತ್ತೇವೆ. ವರುಣಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲಾಗುವುದು. ಅಭ್ಯರ್ಥಿ ಯಾರೆಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.
ಶುಕ್ರವಾರ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿ ಕೆಲ ಶಾಸಕರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾರ್ಯಕರ್ತರ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲ. ಇದಕ್ಕಾಗಿ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯಲ್ಲಿ ಕಾರ್ಯಕರ್ತರ ಆಧಾರಿತ ಆಯ್ಕೆ ಇದೆ. ಮುಖಭಂಗ ತಪ್ಪಿಸಿಕೊಳ್ಳಲು ಕೆಲ ಶಾಸಕರು ಪಕ್ಷ ತೊರೆದಿದ್ದಾರೆ ಎಂದರು.
ಈ ಜಿಲ್ಲೆಯ ಬಿಜೆಪಿ ಶಾಸಕರು ಕಾರ್ಯಕರ್ತರ ಜತೆಗಿದ್ದರು. ಈ ಶಾಸಕರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಯೋಜನೆ ಜನರಿಗೆ ತಲುಪಿಸಿದ್ದಾರೆ. ಕಾರ್ಯಕರ್ತರನ್ನು ಎದುರಿಸುವ ಧೈರ್ಯವಿಲ್ಲದವರು ಪಲಾಯನ ಮಾಡಿದ್ದಾನೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬಿಜೆಪಿ ಸೇರಿದ್ದಾರೆ. ರಾಜಕೀಯ ಧ್ರುವೀಕರಣ ಪದ ಈಗ ಅರ್ಥ ಕಳೆದುಕೊಂಡಿದೆ. ಅಲ್ಲಿ ಸಿಗದಿದ್ದರೆ ಇಲ್ಲಿ, ಇಲ್ಲಿ ಸಿಗದಿದ್ದರೆ ಅಲ್ಲಿ ಎಂಬ ಸ್ಥಿತಿ. ಜಂಪಿAಗ್ ವ್ಯವಸ್ಥೆ ಅಪಾಯಕಾರಿ ರಾಜಕಾರಣ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂಬ ಸಮೀಕ್ಷೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ಉತ್ತರ ಪ್ರದೇಶದಲ್ಲಿ ಸಮೀಕ್ಷೆ ವರದಿಗಳು ಏನಾದವು? ಸಮೀಕ್ಷೆ ವರದಿ ಉಲ್ಟಾಪಲ್ಟಾ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ಸಮೀಕ್ಷೆಗಳು ಸಮೀಕ್ಷೆಗಳಾಗಿಯೇ ಉಳಿಯುತ್ತವೆ. ಫಲಿತಾಂಶಗಳು ಫಲಿತಾಂಶಗಳಾಗಿ ಹೊರಬರುತ್ತವೆ ಎಂದು ಉತ್ತರಿಸಿದರು.