ಚೈತ್ರಾ ಪ್ರಕರಣಕ್ಕೆ ಮತ್ತೊಂದು ತಿರುವು

Advertisement

ಹೊಸಪೇಟೆ: ಬೈಂದೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿಯ ಮಠದಲ್ಲಿ ವ್ಯಕ್ತಿಯೊಬ್ಬರು ೬೦ ಲಕ್ಷ ರೂ. ಇರುವ ಹಣದ ಬ್ಯಾಗ್ ಇಟ್ಟು ಹೋಗಿರುವ ವಿಡಿಯೋ ವೈರಲ್ ಆಗಿರುವುದು ಬೆಳಕಿಗೆ ಬಂದಿದೆ.
ಸೆ. ೮ರಂದು ಚೈತ್ರಾ ಕುಂದಾಪುರ ಆಂಡ್ ಟೀಂನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಎ-೩ ಆರೋಪಿಯು ಮೈಸೂರು ಕಡೆ ಹೋಗುವ ಸಂದರ್ಭದಲ್ಲಿ ಸ್ವಾಮೀಜಿ ಅವರ ಕಾರು ಚಾಲಕ ರಾಜು ೬೦ ಲಕ್ಷ ರೂ. ಇರುವ ಬ್ಯಾಗ್‌ನ್ನು ವ್ಯಕ್ತಿವೊಬ್ಬರಿಗೆ ಕೊಟ್ಟು ಹೋಗಿರುವ ಆರೋಪ ಮಾಡಲಾಗಿದೆ.
ವಂಚನೆ ಪ್ರಕರಣವು ವಿಕೋಪಕ್ಕೆ ಹೋಗುವುದನ್ನು ಮನಗಂಡು ಹಣದ ಬ್ಯಾಗ್ ಪಡೆದ ವ್ಯಕ್ತಿ ಬುಧವಾರ ಎ-೩ ಆರೋಪಿ ನೀಡಿದ ೬೦ ಲಕ್ಷ ಹಣದ ಬ್ಯಾಗ್‌ನ್ನು ಮಠದಲ್ಲಿ ಇಟ್ಟು ಖಾಸಗಿ ಸ್ಥಳದಿಂದಲೇ ವಿಡಿಯೋ ಮಾಡಿ ನನಗೆ ಸ್ವಾಮೀಜಿ ಹಣ ಕೊಟ್ಟಿದ್ದರು. ನಾನು ಈ ಹಣ ಕೊಡಲು ಹೊರಟಿದ್ದೇನೆ ಅಂತ ವಿಡಿಯೋ ಮಾಡಿ ಅಲ್ಲಿಂದ ಮಠಕ್ಕೆ ಬಂದು ಪಲ್ಲಕ್ಕಿ ಬಳಿ, ಹಣದ ಬ್ಯಾಗ್ ಇಟ್ಟು ನಾನು, ಬ್ಯಾಗ್ ಇಟ್ಟಿದ್ದೇನೆ ಅಂತ ವಿಡಿಯೋ ಮಾಡಿರುವ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಸಿಸಿಬಿ ಪೊಲೀಸರು ಹಣ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.