ಬೆಂಗಳೂರು: ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಕನ್ನಡಿಗರ್ಯಾರೂ ಸಿದ್ಧರಿರಲಿಲ್ಲವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕನ್ನಡಿಗರಿಗೆ ಪಂಗನಾಮ ಹಾಕಿ ಕೇರಳದ ಯುವಕರಿಗೆ ಅವಕಾಶ ಕೊಡುವಂಥ ಮಹಾನುಭಾವರು ಕರ್ನಾಟಕ ಕಾಂಗ್ರೆಸ್ ದವರು. ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಕನ್ನಡಿಗರ್ಯಾರೂ ಸಿದ್ಧರಿರಲಿಲ್ಲವೇ?
ಖಾಸಗಿ ಏಜೆನ್ಸಿ ಮೂಲಕ ನೇಮಕವಾದದ್ದು ಅನ್ನೋದು ಬರಿಯ ಸಬೂಬು. ಕಾಂಗ್ರೆಸ್ ಯುವನಿಧಿ ಗ್ಯಾರಂಟಿಯ ಹಕೀಕತ್ತು ಇದೇ!! ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿರುವ ಸಿದ್ದರಾಮಯ್ಯನವರ ನಿಷ್ಠೆ ಕರ್ನಾಟಕ ಅಥವಾ ಕನ್ನಡಿಗರ ಪರವಾಗಿಲ್ಲ ಅನ್ನೋದು ಸ್ಪಷ್ಟವಾಗಿದೆ. ಕರ್ನಾಟಕದ ನೆಲ, ಜಲ, ಗಾಳಿ ಬೇಕು. ಮತ ಹಾಕಲು ಕನ್ನಡದವರೇ ಬೇಕು ಆದ್ರೆ ನಿಯತ್ತು ಮಾತ್ರ ಬೇರೆಲ್ಲೋ ಯಾಕೆ ಸಿದ್ದಣ್ಣನವರೇ? ಎಂದಿದ್ದಾರೆ.