ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Advertisement

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಸ್ಸುಗಳು ಕೆಟ್ಟು ನಿಂತು ಗಂಟೆ ಗಟ್ಟಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ಮಳೆಯ ನಡುವೆ ವಾಹನಗಳ ದಟ್ಟಣೆ ಉಲ್ಬಣ ಗೊಂಡಿದ್ದು ಆಂಬುಲೆನ್ಸ್ ಕೂಡಾ ಈ ನಡುವೆ ಸಿಲುಕಿ ರೋಗಿ ಪರದಾಡುವಂತಾಗಿದೆ.

ಮಳೆಯ ಜೊತೆಗೆ ಟ್ರಾಫಿಕ್ ನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವ ಸ್ಥಿತಿ ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ 2 KSRTC ಬಸ್ಸುಗಳಿಂದ ಸಂಭವಿಸಿದೆ.

ನಿರಂತರ ಮಳೆಯ ನಡುವೆ ಕೆಟ್ಟು ರಸ್ತೆ ಮಧ್ಯದಲ್ಲಿ 2 KSRTC ಬಸ್ಸುಗಳು ನಿಂತಿವೆ. ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಘಟನೆ ನಡೆದಿದೆ. ಬಸ್ಸುಗಳು ಕೆಟ್ಟು ನಿಂತ ಪರಿಣಾಮ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಳಗಿನ ಜಾವದಿಂದಲೂ ನಿಂತಲ್ಲೇ ನೂರಾರು ವಾಹನಗಳು ನಿಂತಿವೆ. ನಿರಂತರ ಮಳೆಯಲ್ಲೇ ಪ್ರವಾಸಿಗರು ಪ್ರಯಾಣಿಕರು ಪರದಾಡುವಂತಾಗಿದೆ.

ಟ್ರಾಫಿಕ್ ನಡುವೆ ಆಂಬುಲೆನ್ಸ್‌ ಸಹಾ ಈ ಮಧ್ಯೆ ಸಿಲುಕಿಕೊಂಡು ಮಂಗಳೂರಿಗೆ ಹೋಗುತ್ತಿದ್ದ ರೋಗಿ ಒಬ್ಬರು ಪರದಾಟ ಪಡುತ್ತಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್,ಮೂಡಿಗೆರೆ ಪೊಲೀಸರು ಹರಸಹಾಸ ಪಡುತ್ತಿದ್ದಾರೆ.

ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಆಗಾಗ್ಗೆ ಸಂಭವಿಸುತ್ತಿರುತ್ತದೆ