ಬೆಂಗಳೂರು: ಚಂದ್ರಯಾನ 3 ಚಂದ್ರನ ಅಂಗಳದಲ್ಲಿ ಅಧ್ಯಯನ ಪ್ರಾರಂಭಿಸಿರುವ ಪ್ರಗ್ಯಾನ್ ರೋವರ್ ಚಂದ್ರನ ತಾಪಮಾನದ ವರದಿ ಕಳುಹಿಸಿದ ನಂತರ ರೋವರ್‌ನಲ್ಲಿ ಇರುವ ನ್ಯಾವಿಗೇಷನ್ ಕ್ಯಾಮೆರಾದಿಂದ ‘ಮಿಷನ್‌ನ ಚಿತ್ರ’ ತೆಗೆದಿದೆ. ಎಂದು ಇಸ್ರೋ ಸಂಸ್ಥೆ ತನ್ನ ಅಧಿಕೃತ ಟ್ವೀಟ್ ಮುಖಾಂತರ ತಿಳಿಸಿದೆ. ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಕ್ಲಿಕ್ಕಿಸಿದೆ ಎಂದು ತಿಳಿಸಿದ್ದಾರೆ.