ಗ್ಯಾರಂಟಿ ಜಾರಿಯಾಗದೇ ಇದ್ರೆ ಹೋರಾಟ

ಕಟೀಲ್
Advertisement

ಮಂಗಳೂರು: ಕಾಂಗ್ರೆಸ್‌ ಅಡ್ಡದಾರಿಯಲ್ಲಿ ಅಧಿಕಾರ ಹಿಡಿದಿದೆ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಘೋಷಣೆ ಮಾಡಿ ಈಗ ಮೀಟಿಂಗ್‌ ಮೇಲೆ ಮೀಟಿಂಗ್‌ ಮಾಡುತ್ತಿದ್ದೂ ಅಧಿಕಾರಕ್ಕೆ ಬಂದು 20 ದಿನ ಕಳೆದರೂ ಯೋಜನೆ ಘೋಷಿಸಿಲ್ಲ. ಗ್ಯಾರಂಟಿ ಜಾರಿಯಾಗದೇ ಇದ್ರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡದಾರಿಯಲ್ಲಿ ಅಧಿಕಾರಿ ಹಿಡಿದು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ ಎಂದರು.