ಗ್ಯಾರಂಟಿಯಾದ ಗೃಹಜ್ಯೋತಿ

Advertisement

ಬೆಂಗಳೂರು: ಸುದೀರ್ಘ ಮೂರು ಗಂಟೆಗಳ ಕಾಲ ನಡೆದ ಸಂಪುಟ ಸಭೆಯನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ತರಬೇಕೆಂದು ತಿರ್ಮಾನಿಸಿದ್ದೆವೆ ಎಂದರು, ಈ ಗ್ಯಾರಂಟಿಗಳಿಗೆ ಯಾವುದೇ ನಿರ್ಭಂದವಿಲ್ಲ ಮೊದಲನೆಯದಾಗಿ ಗೃಹ ಜ್ಯೋತಿ ಎಲ್ಲರಿಗೂ ಅನ್ವಯ ಆಗುತ್ತದೆ, ಕಳೆದ 12 ತಿಂಗಳಲ್ಲಿ ಬಳಸಿರುವ ವಿದ್ಯುತ್‌ ಹಾಗು ಅದರ ಮೇಲಿನ ಶೇ 10 ಹೆಚ್ಚುವರಿಯನ್ನು ಲೆಕ್ಕಹಾಕಿ ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆ ಅವರು ಬಿಲ್​ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.