ಗೃಹ ಸಚಿವರ ವಾಹನಕ್ಕೆ ಘೇರಾವ್

Advertisement

ಹುಬ್ಬಳ್ಳಿ: ಡಿಸಿಪಿ ವರ್ಗಾವಣೆ ರದ್ದು ಕೋರಿ ಗೃಹ ಸಚಿವ ಡಾ. ಜಿ ಪರಮೇಶ್ವರ ವಾಹನಕ್ಕೆ ಘೇರಾವ್ ಹಾಕಿದ ಘಟನೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಗೃಹ ಸಚಿವರ ಆಗಮನಕ್ಕಾಗಿಯೇ ಕಾದು ಕುಳಿತಿದ್ದ ಆದಿ ಜಾಂಬವ ಸಮುದಾಯದ ಮುಖಂಡರು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ವರ್ಗಾವಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ, ಕೆಲ‌ಕಾಲ ಪ್ರತಿಭಟನೆ ನಡೆಸಿದರು.
ಕೊನೆಗೆ ವಾಹನದಿಂದ ಕೆಳಗಿಳಿದು ಬಂದ ಪರಮೇಶ್ವರ್, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು. ಗೃಹ ಸಚಿವರು ನೀಡಿದ ಸಮಜಾಯಿಶಿಯಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.