ಗೂಂಡಾ ಕಾಯ್ದೆಯಡಿ ಓರ್ವನ ಬಂಧನ

ಬಂಧನ
Advertisement

ಹುಬ್ಬಳ್ಳಿ: ನಗರದ ಲಖನ್ @ಲಕ್ಯಾ. ಜಿತು ಬೋಜಗಾರ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಹುಬ್ಬಳ್ಳಿ ನಗರದ ಲಖನ್ ಕೊಲೆ ಯತ್ನ, ಚಾಕು ಇರಿತ, ಜಾತಿ ನಿಂದನೆ ಸೇರಿದಂತೆ ವಿವಿಧ ಕಾಯ್ದೆಯಡಿ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಧಾರವಾಡದ ಕೇಂದ್ರ ಕಾರಾಗೃಹ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.