ಒಂದು ಕೋಟಿಗೂ ಅಧಿಕ ಮೌಲ್ಯದ ಪಾನ್ ಮಸಾಲ ಜಪ್ತಿ
ಬೀದರ್ : ಇಲ್ಲಿಯ ಕೊಳಾರ್ ಕೈಗಾರಿಕಾ ಪ್ರದೇಶದಲ್ಲಿ ಅನುಮತಿ ಇಲ್ಲದೆ ಪಾನ್ ಮಸಾಲ ಸಿದ್ದಪಡಿಸಿ ಸಂಗ್ರಹಿಸಿ ಇಡಲಾಗುತ್ತಿದ್ದ ಕಂಪನಿ ಮೇಲೆ ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಕಮಿಷನರ್ ಮಹೇಶ್ ಪಾಟೀಲ್ ಹಾಗೂ ಆಹಾರ ಗುಣಮಟ್ಟ ಮಾಪನ ಸಂಸ್ಥೆ ಅಧಿಕಾರಿ ಮನೋಹರ ಹಾಗೂ ನ್ಯೂಟನ್ ಪೊಲೀಸರ ತಂಡ ಸೋಮವಾರ ದಾಳಿ ನಡೆಸಿದೆ. ಈ ವೇಳೆ ಒಂದು ಕೋಟಿಗೂ ಅಧಿಕ ಮೌಲ್ಯದ ಪಾನ್ ಮಸಾಲ ಹಾಗೂ ಯಂತ್ರಗಳು ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ