ಗಿಲಕ್.. ಗಿಲಕ್‌.. ಶಿವಣ್ಣ ಭರ್ಜರಿ ಸ್ಟೆಪ್‌

Advertisement

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೆಂಚ್ಯೂರಿ ಸ್ಟಾರ್ ಡಾ. ಶಿವರಾಜಕುಮಾರ ಅಭಿನಯದ 125ನೇ ಚಲನಚಿತ್ರ ʻವೇದʼದ ಪ್ರೀ ರಿಲೀಸ್ ಸಮಾರಂಭ ಬುಧವಾರ ಸಂಜೆ ನಡೆಯಿತು.
ವೇದಿಕೆಗೆ ನಟ ಶಿವರಾಜಕುಮಾರ ಅವರು ಬರುತ್ತಿದ್ದಂತೆ ಅಭಿಮಾನಿಗಳು ಶಿವಣ್ಣನ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶಿವರಾಜಕುಮಾರ, ಹುಬ್ಬಳ್ಳಿಗೆ ಬರುವುದೆಂದರೆ ಒಂದು ರೀತಿ ಸಂಭ್ರಮ. ಇಲ್ಲಿನ ಆರಾಧ್ಯದೈವ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದೊಂದಿಗೆ ನಮಗೆ ಉತ್ತಮ ನಂಟಿದೆ. ನಮ್ಮ ಪ್ರೊಡೆಕ್ಷನ್‌ನಲ್ಲಿ ನನ್ನ 125ನೇ ಸಿನಿಮಾ ಮೂಡಿ ಬಂದಿದೆ. ಡಿ. 23 ರಂದು ಚಿತ್ರ ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದರು.
ವೇದಿಕೆಯಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌, ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕಿ, ಕೆಲ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಅವರು ಮಾಡಿರುವ ಸಮಾಜಸೇವೆಯ ಕಿರುಚಿತ್ರಗಳನ್ನು ಎಲ್.ಸಿ.ಡಿ. ಮೂಲಕ ಪ್ರದರ್ಶಿಸುತ್ತಿದ್ದರೆ, ಪುಟಾಣಿ ಮಕ್ಕಳು ಗೊಂಬೆ ಹೇಳುತೈತೆ…. ಮತ್ತೆ ಹೇಳುತೈತೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮಾಜಿ ಸಚಿವ ಸಂತೋಷ ಲಾಡ್, ಗೀತಾ ಶಿವರಾಜಕುಮಾರ, ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನೀಲಕುಮಾರ ಪಾಟೀಲ, ಆನಂದ ಕಲಾಲ, ಸಂತೋಷ ಶೆಟ್ಟಿ, ಸಮಂಧೀರ್ ಸಿಂಗ್ ಇತರರು ಇದ್ದರು.