ಗಣೇಶ್ ರಾಣೆಬೆನ್ನೂರು
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಗಾಳಿಪಟ-೨' ಮೂಲಕ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ ೧೪ ವರ್ಷಗಳ ಬಳಿಕ ಅವರಿಬ್ಬರ ಕಾಂಬಿನೇಷನ್ನಲ್ಲಿ
ಗಾಳಿಪಟ’ ಸೀಕೆಲ್ ಮೂಲಕ ತೆರೆಯ ಮೇಲೆ ಪಟ' ಹಾರಿಸಲು ಸಜ್ಜಾಗಿದ್ದಾರೆ. ಈ ಮಧ್ಯದಲ್ಲಿ
ಮುಗುಳುನಗೆ’ ಬೀರಿ ಈ ಯಶಸ್ವಿ ಜೋಡಿ ಗಾಳಿಪಟ-೨' ಮುಖೇನ ಹಾಜರಾಗಿದೆ. ಈ ಸಿನಿಮಾ ಬಗ್ಗೆ ಆರಂಭದಿಂದಲೇ ಒಂದು ಕುತೂಹಲವಿತ್ತು. ಅದನ್ನು ಎಷ್ಟರಮಟ್ಟಿಗೆ ಈಡೇರಿಸುತ್ತಾರೆ ಎಂಬುದರ ಬಗ್ಗೆ ಇಂದು ತೆರೆ ಬೀಳಲಿದೆ. ವಿಶಾದ್ಯಂತ ಇಂದಿನಿಂದ ಸಿನಿಮಾ ರಾರಾಜಿಸಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿರುವುದು ಚಿತ್ರತಂಡದ ಪ್ಲಸ್ ಪಾಯಿಂಟ್.
ಒಂದು ಸಿನಿಮಾದ ಮುಂದುವರಿದ ಭಾಗ ಎಂದಮೇಲೆ ಒಂದಷ್ಟು ಕೌತುಕ, ನಿರೀಕ್ಷೆ ಸಹಜ. ಅವೆರಡೂ ಗಣೇಶ್ ಹಾಗೂ ಭಟ್ಟರ ಮೇಲೆ ಹೇರಳವಾಗಿದೆ. ಇವರಿಬ್ಬರೂ ಆ ಜವಾಬ್ದಾರಿಯನ್ನು ಹೇಗೆ ಸಂಭಾಳಿಸಿದ್ದಾರೆ ಎಂಬುದೂ ಒಂಥರಾ ಚಾಲೆಂಜಿಂಗ್ ವಿಷಯ. ಸಿನಮಾ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಗಣೇಶ್, ಖುಷಿ, ನಿರೀಕ್ಷೆ, ಕುತೂಹಲ ಅವರ ಮುಖದಲ್ಲೂ ಮನೆ ಮಾಡಿತ್ತು. ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ಖುಷಿಯ ವಿಚಾರವಾದರೆ, ಈಗಿನ ಟ್ರೆಂಡ್
ಗಾಳಿಪಟ-೨’ನ್ನು ಹೇಗೆ ಸೀಕರಿಸಲಿದ್ದಾರೆ ಎಂಬ ಕುತೂಹಲದ ನಿರೀಕ್ಷೆಯಲ್ಲೇ ಶುಕ್ರವಾರಕ್ಕಾಗಿ ಕಾದು ಕುಳಿತಿದ್ದಾರೆ. ನನಗೆ
ಗಾಳಿಪಟ ೨’ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಯಶಸ್ವಿ ಜೋಡಿ ಸೇರಿ ಮಾಡಿರುವ ಚಿತ್ರ ಎಂಬುದು ಮೊದಲ ಕಾರಣ. ಹಾಗೆಯೇ ಹೊಸ ಬಗೆಯ ಕಥೆ ಇರುವ ಚಿತ್ರ. ಸ್ನೇಹ, ಸ್ನೇಹದ ಮಹತದ ಬಗ್ಗೆ ಸಾರುವ ಈ ಸಿನಿಮಾದಲ್ಲಿ ಭಟ್ಟರ ಎಂದಿನ ಸಿಗ್ನೇಚರ್ ಸ್ಟೈಲ್ ಮೇಕಿಂಗ್ ಇದೆ. ನಗಿಸುತ್ತಾರೆ, ಅಳಿಸುತ್ತಾರೆ, ಮನರಂಜನೆಗೆ ಮೋಸ ಮಾಡದೇ ಮತ್ತೆ ಮತ್ತೆ ಥಿಯೇಟರ್‌ನತ್ತ ಮುಖ ಮಾಡುವಂತೆ ಮಾಡುತ್ತಾರೆ ಎಂಬ ಗ್ಯಾರೆಂಟಿ ಕೊಡಬಲ್ಲೆ. ನನ್ನನ್ನೂ ಸೇರಿದಂತೆ ಬಹುತೇಕರಿಗೆ ಗಾಳಿಪಟ'ದ ಮೇಲೆ ನಿರೀಕ್ಷೆ ಇದೆ. ಯೋಗರಾಜ್ ಭಟ್ ಹಾಗೂ ನನ್ನ ಜೋಡಿಗೆ ಜನ ಮೆಚ್ಚಿ ಹರಸಿದ್ದಾರೆ. ಮೊದಲ
ಗಾಳಿಪಟ’ಕ್ಕೆ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಆ ಯಶಸ್ಸೇ, ಪುನಃ ಗಾಳಿಪಟ ೨' ಚಿತ್ರ ಮಾಡೋಕೆ ಕಾರಣ. ಇಲ್ಲೂ ದಿಗಂತ್ ಇದ್ದಾರೆ. ರಾಜೇಶ್ ಕೃಷ್ಣ ಬದಲಾಗಿ ಈ ಬಾರಿ ಪವನ್ ಕುಮಾರ್ ನಟಿಸಿದ್ದಾರೆ. ಮೂವರ ಜೋಡಿ ಖಂಡಿತಾ ಮೋಡಿ ಮಾಡಲಿದೆ. ನಗುವಿನ ವಿಷಯದ ಹಿಂದೆ ಸಾಕಷ್ಟು ವಾಸ್ತವದ ಸಂಗತಿಗಳೂ ಇಲ್ಲಿವೆ. ಇಂತಹ ಸಿನಿಮಾ ಮಾಡೋಕ್ಕೆ ಮೊದಲು ಒಳ್ಳೆಯ ಪ್ರೊಡಕ್ಷöನ್ ಬೇಕು. ರಮೇಶ್‌ರೆಡ್ಡಿ ಅವರು ಸಿನಿಮಾಗೆ ಏನೇನು ಬೇಕೋ ಎಲ್ಲವನ್ನೂ ನೋಡಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ' ಎಂದು ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಗಣೇಶ್. ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ
ಗಾಳಿಪಟ-೨’ ಕುರಿತು ಎಲ್ಲೆಡೆಯಿಮದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂಬುದು ಚಿತ್ರತಂಡದ ಅನಿಸಿಕೆ. ಅದಕ್ಕೆ ಸಾಕ್ಷಿಯಾಗಿ ಒಂದು ದಿನದ ಮೊದಲೇ ಪ್ರೀಮಿಯರ್ ಶೋ ಎಲ್ಲೆಡೆ ಬುಕ್ ಆಗಿರುವುದು ಹಾಗೂ ಬಿಡುಗಡೆಯ ದಿನಕ್ಕೂ ಅದೇ ರೀತಿಯ ರೆಸ್ಪಾನ್ಸ್ ಸಿಕ್ಕಿದೆ ಎಂಬುದು ತಂಡದ ಅಭಿಪ್ರಾಯ.