ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯಲ್ಲಿ ರವಿವಾರ ರಾತ್ರಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಅವರಿಂದ ೭೨೨ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹಳೇಹುಬ್ಬಳ್ಳಿ ನೇಕಾರನಗರದ ಸೈಫಅಲಿ ಎಂ. ಬಿಜಾಪುರ ಹಾಗೂ ಬಾಬುಭಟ್ ಕೊರ್ಲಿ ಉತ್ತರ ಹಳೆ ಗೋವಾದ ಸೋನುಕುಮಾರ ಬಿ. ಮಹಾಲೆ ಬಂಧಿತರು.
ಬೇರೆ ಬೇರೆ ಪ್ರಕರಣದಲ್ಲಿ ಬಂಧಿತರಾಗಿ ಕಾರಾಗೃಹದಲ್ಲಿ ಪರಿಚಿತರಾಗಿದ್ದ ಇಬ್ಬರು ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಪರಸ್ಥಳದಿಂದ ಗಾಂಜಾವನ್ನು ತೆಗೆದುಕೊಂಡು ಬಂದು ಇಲ್ಲಿನ ರಾಯನಾಳ ಕೆರೆ ಸಮೀಪದ ಆನಂದ ನಗರ ರಸ್ತೆಯ ಕುಷ್ಠರೋಗ ಆಸ್ಪತ್ರೆ ಬಳಿ ಸಣ್ಣ ಚೀಟಿಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಇಬ್ಬರನ್ನು ಬಂಧಿಸಿ ಸೈಫಅಲಿ ಬಳಿ ೬೪೭ಗ್ರಾಂ ಹಾಗೂ ಸೋನುಕುಮಾರ ಹತ್ತಿ ೭೫ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.