ಖಾರದ ಹುಗ್ಗಿ

ಖಾರದ ಹುಗ್ಗಿ
Advertisement

ಬೇಕಾಗುವ ಸಾಮಗ್ರಿ: ಅರ್ಧ ಪಾವು ಅಕ್ಕಿ, ಕಾಲು ಪಾವು ಹೆಸರು ಬೇಳೆ, ೨ ಚಮಚ ಧನಿಯಾ, ಜೀರಿಗೆ ೧ ಚಮಚ, ಕಪ್ಪುಮೆಣಸು ೬-೭ ಕಾಳುಗಳು, ಲವಂಗ ೪-೫, ಕರಿಬೇವು ೭-೮ ಎಲೆ, ಒಣಕೊಬ್ಬರಿ ತುರಿ ೧ ಬಟ್ಟಲು, ಬ್ಯಾಡಗಿ ಮೆಣಸಿನಕಾಯಿ- ೪, ಇಂಗು ಸ್ವಲ್ಪ, ಅಡುಗೆ ಎಣ್ಣೆ- ೩ ಚಮಚ, ತುಪ್ಪ ೨ ಚಮಚ. ಸಾಸಿವೆ, ಅರಿಷಿಣ ಒಗ್ಗರಣೆಗೆ.
ಮಾಡುವ ವಿಧಾನ: ಅಕ್ಕಿ, ಹೆಸರುಬೇಳೆ ಎರಡನ್ನು ತೊಳೆದು ಕುಕ್ಕರಿನಲ್ಲಿ ಬೇಯಿಸಿ. ಧನಿಯಾ, ಜೀರಿಗೆ, ಮೆಣಸು, ಲವಂಗ ಕೆಂಪಗೆ ಹುರಿದು, ಒಣಕೊಬ್ಬರಿ ಬೆಚ್ಚಗೆ ಮಾಡಿ, ಬ್ಯಾಡಗಿ ಮೆಣಸಿನಕಾಯಿಯೊಂದಿಗೆ ಹುಗ್ಗಿ ಪೌಡರ್ ತಯಾರಿಸಿ. ಬೆಂದ ಅನ್ನ, ಹೆಸರಬೇಳೆ, ಎಣ್ಣೆ, ತುಪ್ಪ ಮಿಶ್ರ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಅರಿಷಿಣ ಒಗ್ಗರಣೆ ಮಾಡಿ. ಎಲ್ಲವನ್ನು ಬೆರಸಿ ಚೆನ್ನಾಗಿ ಒಂದು ಕುದಿ ಬಂದ ಮೇಲೆ ಹುಗ್ಗಿ ಪುಡಿ, ಉಪ್ಪು ಬೆರಸಿ, ಚೆನ್ನಾಗಿ ಕೈಯಾಡಿಸಿ ಇಳಿಸಿದರೆ ಖಾರದ ಹುಗ್ಗಿ ತಯಾರು.

ಖಾರದ ಹುಗ್ಗಿ