ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ‌ ನಡುವೆ ಮಾರಾಮರಿ

Advertisement

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ‌ ನಡುವೆ ಮಾರಾಮರಿ ನಡೆದ ಘಟನೆ ಜಿಲ್ಲೆ ಮಾಲೂರು ತಾಲೂಕಿನ ಕೊರಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ನಡುರಸ್ತೆಯಲ್ಲೇ ಗಂಡಸರು ಮತ್ತು ಹೆಂಗಸರು ಮಚ್ಚು, ಲಾಂಗ್‌ ತೋರಿಸಿ ಬೆದರಿಸಿದ್ದಾರೆ. ಮಹಿಳೆ ಸೇರಿದಂತೆ, ಗ್ರಾಮದ ಗಂಡಸರು ಮಚ್ಚು ಹಿಡಿದು ಗಲಾಟೆ ಮಾಡಿದ್ದಾರೆ. ರಸ್ತೆಯ ತಿರುವಿನಲ್ಲಿ ಇಬ್ಬರು ಮಾತನಾಡುತ್ತಿದ್ದ ವೇಳೆ ಬೈಕ್ ಸವಾರ ಜಾಗ ಬಿಡು ಎಂದಿದಕ್ಕೆ ಈ ಜಗಳ ಆರಂಭವಾಗಿದೆ ಎನ್ನಲಾಗ್ತಿದೆ. ಮೊದಲಿನಿಂದಲೂ ಎರಡು ಕುಟುಂಬಗಳ ನಡುವೆ ರಾಜಕೀಯ ವೈಷಮ್ಯವಿತ್ತು ಎನ್ನಲಾಗ್ತಿದೆ. ಕೋಲಾರದಲ್ಲಿ ದಿನದಿಂದ ದಿನಕ್ಕೆ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.