ಚುನಾವಣೆಯ ಸಂದರ್ಭದಲ್ಲಿ ಉಗಾದಿ ಬಂದಿದೆಯೋ? ಉಗಾದಿಯ ಸಮಯದಲ್ಲಿ ಚುನಾವಣೆ ಬಂದಿದೆಯೋ? ಏನೇ ಯಾವಾಗ ಬರಲಿಬುಡಿ. ಇದು ಉಗಾದಿಯ ಕ್ರೋಧಿ ಸಂವತ್ಸರ ರಾಜಕೀಯ ಮಂದಿಗೆ ಭವಿಷ್ಯ ಹೀಗಿದೆ….
ಸೋಮವಾರ ಧ್ಯಾನಕ್ಕೆ ರೆಸ್ಟ್ ಕೊಡಿ
ಅಬ್ ಕಿ ಬಾರ್…. ಇರಬಹುದು ಆದರೆ ಚಾರ್ ಸೌ ಪಾರ್ ಅನ್ನುವುದೇನಿದೆಯಲ್ಲ ಅದು ಸ್ವಲ್ಪ ಕಷ್ಟ. ಬೇವು ಮತ್ತು ಬೆಲ್ಲ.. ಎರಡನ್ನೂ ಸಮನಾಗಿ ತಿಂದರೆ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಅಂದ ಮಾತ್ರಕ್ಕೆ ನೀವು ಹಗಲೆಲ್ಲ ಅದನ್ನೇ ಅನ್ನುವುದು ಬೇಡ. ಮತದಾರರು ಭಯಂಕರವಾಗಿದ್ದಾರೆ. ನೋಡಿ ವಿಚಾರ ಮಾಡಿ ಹೆಜ್ಜೆ ಇಡಿ… ಸೋಮವಾರ ಧ್ಯಾನಕ್ಕೆ ರೆಸ್ಟ್ ಕೊಡಿ.
ಯವನಾಡು-ಗಯನಾಡು
ಜೋಡೋ-ಪಾಡು ಅಂತ ಮಾಡಿದಿರಿ ನಿಜ. ಅದನ್ನು ಅಲ್ಲಿಗೇ ಯಾಕೆ ಬಿಟ್ಟಿರಿ? ಇನ್ನು ಇಂಡಿ ಒಕ್ಕೂಟ..ಅದರಲ್ಲಿರುವ ಖತರ್ನಾಕ್ ಮಂದಿಯ ಬಗ್ಗೆ ನೀವು ಹುಷಾರಾಗಿರಬಹುದಿತ್ತು. ಜಗಳಗಂಟರನ್ನು ಸೇರಿಸಿಕೊಂಡು..ನಾವು ಇಂಡಿ…ಸೇಂಗಾ ಹಿಂಡಿ ಅಂದಿದ್ದರೆ ಆಗುತ್ತಿತ್ತು. ಏಳರಾಟ ಇನ್ನೂ ಮುಗಿದಿಲ್ಲ…ಶನಿಮಾತ್ಮನು ಸ್ವಲ್ಪವೇ ಕಣ್ಣು ತೆಗೆದಿರುವುದರಿಂದ ಕಳೆದ ಬಾರಿಗಿಂತ ಉತ್ತಮ ಅಂತ ಹೇಳಬಹುದು.
ಮಾಡಿದ ಜಪ ಸಾಕೇ
ಒಂದಂತೂ ಓಕೆ
ಅಲ್ಲ ಸ್ವಾಮಿ ನೀವು ಅವರ ಹೆಗಲ ಮೇಲೆ ಕೈ ಹಾಕಿದಿರಿ. ಅಂದ ಮಾತ್ರಕ್ಕೆ ಇನ್ನೇನು ಬುಡು ಮೂರಕ್ಕೆ ಮೂರೂ ನಮವೇ ಅಂತ ನೀವು ಅಂದುಕೊಂಡಿರಬಹುದು. ಆ ದುರ್ಗಾಮಾತೆ ನಮ್ಮಮೇಲೆ ಸಂಪೂರ್ಣ ಕೃಪೆ ಅಂತ ನೀವು ತಿಳಿದುಕೊಂಡು ಕೆಲಸ ಮಾಡಿ…ಮೂರಕ್ಕೆಮೂರೇನೂ ಸಂಭವ ಇಲ್ಲ… ಒಂದಂತೂ ಒಕೆ… ನಾವು ಹೇಳಿದ ಜಪ ಮಾಡಿ.
ಅಲ್ಲಿ ವಾರಂಟಿ, ಇಲ್ಲಿ ಗ್ಯಾರಂಟಿ
ಅಯ್ಯೋ ಓಗ್ಲಿ ಬುಡ್ರಯ್ಯ… ಅಲ್ಲಿ ವಾರಂಟಿ ಆದರೆ ಇಲ್ಲಿ ಗ್ಯಾರಂಟಿ. ಅಲ್ಲಿ ದೊಡ್ಡಣ್ಣ ಇಲ್ಲಿ ಮದ್ರಾಮಣ್ಣ. ಅವರವು ಎಚ್ಚು ಬಂದರೆ ಗಡಗಡಾ
ಅದಕ್ಕೆ ನಿಮಗೆ ಬೇಕು ಬಲ ಎಡಾ… ಕಳೆದ ಬಾರಿಗೆ ಗಿಂತ ಒಕೆ ಆದರೆ ಸಾಕೇ? ಆಗುತ್ತೆ ಬುಡಿ…
ತಮ್ಮ ಭವಿಷ್ಯ ಓದಿದ ಇವರೆಲ್ಲ ಈ ತಿಗಡೇಸಿ ಭವಿಷ್ಯ ಕಂಡಿದ್ದೇನೆ ಬುಡಿ.. ಆಯ್ತಾ ಕುರ್ಚಿ ಹಿಡಿ ಆಗಲಿಲ್ಲವೇ ಮನೀಗೆ ನಡಿ…..