ಕ್ರಿಕೆಟ್​ ಆಡಲು ರಿಷಭ್ ಪಂತ್​ ಫಿಟ್​

Advertisement

ಬೆಂಗಳೂರು: ಕ್ರಿಕೆಟ್​ ಆಡಲು ರಿಷಭ್ ಪಂತ್​ ಫಿಟ್​ ಆಗಿದ್ದಾರೆ ಎಂದು ಬಿಸಿಸಿಐ ಅಧಿಕೃತ ಪ್ರಕಟನೆ ಮೂಲಕ ಪಂತ್​ ಫಿಟ್​ನೆಸ್​ ವರದಿಯನ್ನು ಪ್ರಕಟಿಸಿದೆ. ​
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಬಿಸಿಸಿಐ ಫಿಟ್​ನೆಸ್​ ಪಾಸ್​ ಆದ ಕಾರಣ ಪಂತ್​ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜತೆಗೆ ವಿಕೆಟ್ ಕೀಪಿಂಗ್ ಕೂಡ ನಡೆಸಲಿದ್ದಾರೆ. ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಟೂರ್ನಿಯಿಂದ ಹೊರಗುಳಿದಿದ್ದಾರೆ. 14-ತಿಂಗಳ ಪುನರ್ವಸತಿ ಮತ್ತು ಚೇತರಿಕೆಯ ಪ್ರಕ್ರಿಯೆಗೆ ಒಳಗಾದ ನಂತರ ಪಂತ್​ ಅವರು ಕ್ರಿಕೆಟ್​ಗೆ ಮರಳುತ್ತಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಪಂತ್​ ಫಿಟ್ ಎಂದು ಬಿಸಿಸಿಐ ಘೋಷಿಸಿದೆ.