ಕೋವಿಡ್ ನೆಪದಲ್ಲಿ ಚುನಾವಣೆ ಮುಂಚಿತವಾಗಿ ನಡೆಸಲು ಚಿಂತನೆ : ಚುನಾವಣೆ ಎದುರಿಸಲು ಸಿದ್ಧ ಎಂದ ಡಿಕೆಶಿ

dk-shivakumar
Advertisement

ಹುಬ್ಬಳ್ಳಿ: ರಾಹುಲ್ ಗಾಂಧಿ ಅವರಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿ ಸರ್ಕಾರಕ್ಕೆ ಹೆದರಿಕೆ ಉಂಟಾಗಿದೆ. ಮೇಕೇದಾಟು ಪಾದಯಾತ್ರೆ ಮಾಡುವಾಗಲೂ ಕೋವಿಡ್ ನೆಪ ಒಡ್ಡಿದ್ದರು. ನನ್ನ ಮೇಲೆ ಹಾಗೂ ಸಿದ್ದರಾಮಯ್ಯ ಮೇಲೆ 4-5ಕೇಸ್ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಹಕಾರ ಸಚಿವರು ಡಮ್ಮಿ ಮಂತ್ರಿ.
ಒಂದೇ ಒಂದು ಎಪಿಎಂಸಿ ಹಾಗೂ ರೈತರಿಗೆ ಸಹಾಯ ಮಾಡಿಲ್ಲ. ಡಿಸಿಸಿ ಬ್ಯಾಂಕ್ ಗಳ ಜೊತೆಗೆ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದರು. ಸಚಿವರ, ಶಾಸಕರ ಕುಮ್ಮಕ್ಕಿನಿಂದ ಲೂಟಿ ಹೊಡೆಯುವ ತಂತ್ರ ನಡೆಸಿದ್ದು, ರೈತರಿಗೆ ಅನುಕೂಲದ ಬದಲು ಬಿಜೆಪಿ ನಾಯಕರ ಆಸ್ತಿ ಖರೀದಿಗೆ ಸೌಹಾರ್ದ ಬ್ಯಾಂಕ್ ಗಳನ್ಜು ಬಳಸಿಕೊಳ್ಳುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಸೌಹಾರ್ದ ಬ್ಯಾಂಕುಗಳ ರಕ್ಷಣೆಗೆ ನಿಂತಿದ್ದಾರೆ. ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರದ ಸಹಕಾರಿ ಮತ್ತು ಅಪೆಕ್ಸ್ ಬ್ಯಾಂಕುಗಳಲ್ಲಿ ಕಾನೂನು ಬಿಟ್ಟು ಸಾಲ ಕೊಡುತ್ತಿದ್ದಾರೆ. ಎಲ್ಲ ಪರ್ಸಂಟೇಜ್ ವ್ಯವಹಾರ. ಇದು ಸುಳ್ಳಾದರೇ ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕಲಿ ಎಂದು ಅವರು ಹೇಳಿದರು.
ಪಂಚಮಸಾಲಿ, ಒಕ್ಕಲಿಗರು ಮತ್ತು ಎಸ್.ಟಿ ಗಳೂ ಮೀಸಲಾತಿ ಗಡುವು ನೀಡಿದ್ದಾರೆ. ಅವರ ಹಕ್ಕುಗಳಿಗೆ ನಮ್ಮ ತಕರಾರಿಲ್ಲ ಎಂದು ಮೀಸಲಾತಿ ಹೋರಾಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಕೋವಿಡ್ ನೆಪ ಒಡ್ಡಿ ಚುನಾವಣೆ ಪ್ರಿಪೋಂಡ್ ಗೆ ಸಿದ್ಧತೆ ಮಾಡಲಾಗುತ್ತಿದೆ. ಚುನಾವಣೆ ಸಿದ್ಧತೆಯ ಬಗ್ಗೆ ಈಗಾಗಲೆ ಅಧಿಕಾರಿಗಳ ಜತೆ ಚರ್ಚೆ ಮಾಡಿರುವ ಮಾಹಿತಿ ಇದೆ. ಪ್ರಧಾನ ಮಂತ್ರಿ ಕಚೇರಿಯಿಂದ ಅನ್ ಅಫಿಷಿಯಲ್ ಮಾಹಿತಿ ಇದೆ. ಯಾವಾಗ ಚುನಾವಣೆ ಮಾಡಿದರೂ ನಾವು ಸಿದ್ಧ ಎಂದರು.