ಸೇಡಂ: ಕೋಲಿ ಕಬ್ಬಲಿಗ ಸಮಾಜದ ತಾಲ್ಲೂಕು ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಮುತ್ಯಾಲ್(65) ಬೆಳಿಗ್ಗೆ ಕೊಲೆಯಾಗಿರುವ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಪಟ್ಟಣದಲ್ಲಿ ಅವರ ಮಾಲೀಕತ್ವದ ವಿಷ್ಣು ಎಲೆಕ್ಟ್ರಾನಿಕ್ಸ್ ಅಂಗಡಿಯಿತ್ತು. ದಿನಾಲು ರಾತ್ರಿ ಅಲ್ಲಿಯೇ ಮಲಗುತ್ತಿದ್ದರು. ಆದರೆ ಬೆಳಿಗ್ಗೆ ಕೊಲೆಯಾಗಿದೆ. ಕೊಲೆಗಡುಕರು ಚಾಕು ಬಳಸಿದ್ದಾರೆ ಎನ್ನಲಾಗಿದ್ದು, ಜೆಡಿಎಸ್ ಪಕ್ಷದಲ್ಲಿದ್ದರು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವವರಿದ್ದರು. ನಿನ್ನೆ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಶಿವಕುಮಾರ ಪಾಟೀಲ್ ತೆಲ್ಕೂರ, ಸಿಪಿಐ ಆನಂದರಾವ್, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ ನೀಡಿದ್ದಾರೆ.