ಕೈ ಕೊಟ್ಟು’ಕಮಲ’ ಹಿಡಿದ ಪ್ರಭಾಕರ ಚಿಣಿ

Advertisement

ಕುಷ್ಟಗಿ: ಪಟ್ಟಣದ ಕಾಂಗ್ರೆಸ್ ಮುಖಂಡ ಹಾಗೂ ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕರ ಚಿಣಿ ಕಾಂಗ್ರೆಸ್ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಬಳಿಕ ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುಹಾನ ನೇತೃತ್ವದಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಪ್ರಭಾಕರ್ ಚಿಣಿ ಅವರು ಸೇರ್ಪಡೆಗೊಂಡ ನಂತರ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಮಗೆ ಬೆಲೆ ಇಲ್ಲದ ಕಾರಣ ನಾನು ಪಕ್ಷವನ್ನು ತೊರೆದು ಯಾವುದೇ ಫಲಾಪೇಕ್ಷೇ ಇಟ್ಟುಕೊಳ್ಳದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಇಷ್ಟ ಇಲ್ಲದೆ ನನ್ನ ಜೊತೆಗೆ ಅಪ್ಪಾರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂದರು.
ಬಯ್ಯಾಪುರವರನ್ನು ಸೋಲಿಸುವುದು:
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ಉದಾಹರಣೆ ಇಲ್ಲ.ಉಪ್ಪಾರ್ ಸಮಾಜದ ಪ್ರಬಲ ಮುಖಂಡರಾದ ನನಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ೨ ಲಕ್ಷ ರೂಪಗಳನ್ನು ತುಂಬಿ ಅರ್ಜಿ ಸಲ್ಲಿಸಿದ್ದೆ ಆದರೆ ನನಗೆ ಕಾಂಗ್ರೆಸ್ ಪಕ್ಷದವರು ಟಿಕೆಟ್ ನೀಡುವ ಬದಲು ಹಾಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆ ಮಾಡಲು ಶಾಸಕ ಬಯ್ಯಾಪುರವರನ್ನು ಆಯ್ಕೆ ಮಾಡಿರುವುದು ಇದರಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ನನಗೆ ಯಾವುದೇ ಸಂಬಂಧ ಇಲ್ಲ ಮುಂದಿನ ಚುನಾವಣೆಯಲ್ಲಿ ಶಾಸಕ ಬಯ್ಯಾಪುರವರನ್ನು ಸೋಲಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಗೆಲ್ಲಿಸುವುದರ ಮೂಲಕ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅರಳಿಸಲು ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುಹಾನ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ಮುಖಂಡರುಗಳು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಂಕಣಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು. ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿದರು.
ಬಿಜೆಪಿಗೆ ಸೇರ್ಪಡೆಯಾದವರು: ಪುರಸಭೆಯ ಪಕ್ಷೇತರ ಸದಸ್ಯ
ಅಂಬಣ್ಣ ಭಜಂತ್ರಿ, ಪರಶುರಾಮ ನಾಗರಾಳ,ಶ್ರೀಮತಿ ಚಂದ್ರಕಲಾ ಪಿ ಚಿಣಿ, ಸಂಗಪ್ಪ ಚವ್ಹಾಣ,ತಾಲೂಕು ಕಸಾಪ ಅಧ್ಯಕ್ಷ ವೀರೇಶ ಬಂಗಾರಶಟ್ಟರ,
ಶ್ಯಾಮರಾವ್ ಕುಲಕರ್ಣಿ,ರಾಘವೇಂದ್ರ ದೇಸಾಯಿ, ಯಲ್ಲಪ್ಪ ಗದ್ದಿ,ನಾಗರಾಜ ಭೋವಿ,ಚಂದಾಲಿಂಗಪ್ಪ ಹೊಟ್ಟಿ, ಗುರುನಾಥ ಬಾವಿಕಟ್ಟಿ, ಶಾಮಿದಸಾಬ್, ಮಾನಪ್ಪ ಕಮ್ಮಾರ್ ದೇವಪ್ಪ ಬಡಿಗೇರ್, ರಾಮು ದಿಗ್ಗಾವಿ, ಅಮರೇಶ,ಮುತ್ತಪ್ಪ ಮನ್ನಾಪುರ  ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ಇದೇ ವೇಳೆ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರ,ಮಲ್ಲಣ್ಣ ಪಲ್ಲೇದ,ಶರಣು ತಳ್ಳಿಕೇರಿ,ಚಂದ್ರಕಾಂತ ವಡ್ಡಿಗೇರಿ ಸೇರಿದಂತೆ ಅನೇಕರು ಇದ್ದರು.