ಕೇಂದ್ರ ಸಚಿವ ಜೋಶಿ, ಸಭಾಪತಿ ಹೊರಟ್ಟಿ ಅವರಿಂದ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ

ಜೋಶಿ - ಹೊರಟ್ಟಿ
Advertisement

ಹುಬ್ಬಳ್ಳಿ : ಸ್ವಾಮಿ ವಿವೇಕಾನಂದರು ಕಾಲಾತೀತವಾಗಿ ಎಲ್ಲರಿಗೂ ಪ್ರೇರಣೆ ಕೊಡುವಂತಹ ವ್ಯಕ್ತಿತ್ವವುಳ್ಳವರು. ಕತ್ತಲೆಯಿಂದ ಬೆಳಕಿನೆಡೆ ಕರೆದುಕೊಂಡು ಹೋಗುವಂತಹ ಅಗಾಧವಾದ ವ್ಯಕ್ತಿತ್ಚ ಹೊಂದಿದ್ದವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಅವರ ಜನ್ಮ ದಿನದ ಪ್ರಯುಕ್ತ ರಾಷ್ಡ್ರೀಯ ಯುವ ಜನೋತ್ಸವ ನಮ್ಮ ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯುತ್ತಿರುವಂತಹದು ಹೆಮ್ಮೆಯ ಸಂಗತಿಯಾಗಿದೆ. ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನ ಭೂತೊ ಎಂಬವಂತಹ ಕಾರ್ಯಕ್ರಮ ಆಗುತ್ತಿದೆ ಎಂದರು. ಯುವಕರು ತಂಡೋಪ ತಂಡವಾಗಿ ಯುವಕರು ಕಾರ್ಯಕ್ರಮ ಸ್ಥಳಕ್ಕೆ ಬರುತ್ತಿದ್ದಾರೆ ಎಂದರು.
ಈಚೆಗೆ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವುದು ರಾಜಕೀಯ ಪಕ್ಷಗಳಿಗೆ ಕಷ್ಟ. ಆದರೆ, ಈ ಯುವ ಜನೋತ್ಸವಕ್ಕೆ ಯುವಕರು ಹರಿದು ಬರುತ್ತಿರುವುದು ಅವರು ಪ್ರಧಾನಿಯವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವೇ ಕಾರಣ ಎಂದು ನುಡಿದರು.

ಕೇಂದ್ರ ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ: ಕೇಂದ್ರ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ, ಪ್ರಧಾನಿಯವರಿಂದಾಗಲಿ, ನಮ್ಮ ಕೇಂದ್ರ ವರಿಷ್ಠರಿಂದ ಯಾವುದೇ ಮಾಹಿತಿ ಇಲ್ಲ ಎಂದು ಜೋಶಿ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹಾಲಪ್ಪ ಅಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರೂ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.