ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಶೇ. ೪ ರಷ್ಟು ಹೆಚ್ಚಿಸಲಾಗಿದೆ. ಸಂಪುಟ ಸಭೆಯಲ್ಲಿ ಈ ಮಹತದ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ೨೦೨೨ರ ಜುಲೈ ಒಂದರಿಂದಲೇ ಈ ಹೆಚ್ಚಳ ಪೂರ್ವಾನಯವಾಗಿ ಜಾರಿಗೆ ಬರಲಿದೆ. ಈ ನಿರ್ಧಾರದಿಂದ ೫೦ ಲಕ್ಷ ಕೇಂದ್ರ ನೌಕರರು ಮತ್ತು ೬೧ ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳದಿಂದ ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ ಕ್ರಮವಾಗಿ ೧೨,೮೫೨ ಮತ್ತು ೮,೫೬೮ ಕೋಟಿ ರೂ. ಹೊರೆಬೀಳಲಿದೆ.