ಕಲಬುರಗಿ: ಇಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ. ಹಾಗಾಗಿ, ವಿರೋಧಪಕ್ಷಗಳಿಗೆ ಆಗಾಗ ಲವ್ ಲೆಟರ್ ಕಳಿಸುತ್ತಿರುತ್ತದೆ. ಇದು ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಐ ಟಿ ಇಲಾಖೆ 14 ಲಕ್ಷ ದೇಣಿಗೆಯ ಅಸೆಸ್ ಮೆಂಟ್ ಸಿಗುತ್ತಿಲ್ಲ ಎಂದು 1823.08 ಕೋಟಿ ರೂ ಗಳ ತೆರಿಗೆ ಡಿಮ್ಯಾಂಡ್ ನೋಟಿಸು ಕೊಟ್ಟಿದ್ದಾರೆ. ಯಾವುದೇ ಅಸೆಸ್ಮೆಂಟ್ ಆರ್ಡರ್ ಇಲ್ಲ ಇಲ್ಲದೆ. ಯಾವ ಆಧಾರದ ಮೇಲೆ ನೋಟಿಸು ನೀಡಿದ್ದಾರೆ ಗೊತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ಆರ್ ಟಿ ಆ್ಯಕ್ಟ್ ಸೆಕ್ಷನ್ 13 ರ ಅಡಿಯಲ್ಲಿ ರಿಯಾಯಿತಿ ಇರುತ್ತದೆ. ಯಾರಾದರೂ ವ್ಯಕ್ತಿ ದಾನದ ರೂಪದಲ್ಲಿ ಹಣ ಕೊಟ್ಟರೆ ಫಾರಂ 24 ರ ಅಡಿಯಲ್ಲಿ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು ನಂತರ ಚುನಾವಣಸ ಆಯೋಗ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾರೆ. ಹಾಗೆ ಅಧಿಕೃತವಾಗಿ ಪ್ರಕಟಿಸಿದ ಮಾಹಿತಿಯ ಬಗ್ಗೆ ನೋಟಿಸು ಜಾರಿ ಮಾಡಿರುವುದು ಅಚ್ಚರಿಯಾಗಿದೆ ಎಂದರು.
ಯಡಿಯೂರಪ್ಪ ಸಿಎಂ ಇದ್ದಾಗ ಸಹಾರ ಡೈರಿ ಸಿಕ್ಕಿತ್ತಲ್ಲ ಹಾಗೂ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಷೀನ್ ಸಿಕ್ಕಿತ್ತಲ್ಲ ಅದೇನಾಯ್ತು ತನಿಖೆಗಳು ಯಾಕೆ ನಡೆಸಲಿಲ್ಲ. ಬಿಜೆಪಿಯೂ ಕೂಡಾ ದೇಣಿಗೆ ಸ್ವೀಕರಿಸಿದೆ. ಆ ಬಗ್ಗೆ ಯಾಕೆ ನೋಟಿಸು ನೀಡಲಿಲ್ಲ ಎಂದು ಆಕ್ಷೇಪಿಸಿದರು.
ಕೇಜ್ರೀವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕರನ್ನು ಅರೆಸ್ಟ್ ಮಾಡಿರುವುದಕ್ಕೆ ಜರ್ಮನ್, ಅಮೇರಿಕಾ ಹಾಗೂ ಯುನೈಟೆಡ್ ನೇಷನ್ ನವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ರಾಜ್ಯ ಬಿಜೆಪಿಯಲ್ಲಿ ಬಂಡಾಯ ಪ್ರಾರಂಭವಾಗಿದೆ. ಯಡಿಯೂರಪ್ಪ ಸೇರಿದಂತೆ ನಾಯಕರ ವಿರುದ್ದ ಅವರದೇ ಪಕ್ಷದವರಿಂದ ವಿರೋಧವಾಗುತ್ತಿದೆ. ಟಿಕೇಟ್ ಹಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲವನ್ನು ಸರಿಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭವಾಗಿದೆ. ಆಂತರಿಕ ಸರ್ವೆ ಪ್ರಕಾರ 200 ಸೀಟು ಬರಲ್ಲ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖರ್ಗೆ ಸಾಹೇಬರನ್ನು ಸೋಲಿಸಿರುವ ಜಾಧವ ಎಂಪಿ ತರ ವರ್ತಿಸುವ ಬದಲು ಮೋದಿ ಅಭಿಮಾನಿ ಬಳಗದ ಘಟಕದ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಜಾಧವ್ 50 ಸಾಧನೆ ಮಾಡಿರುವಾಗಿ ಹೇಳಿದ್ದಾರೆ. ಕೇವಲ ಐದು ಸಾಧನೆ ತಿಳಿಸಲು ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಗ್ರಾಮೀಣ ಅಧ್ಯಕ್ಷರು 10.02.2024 ರಂದು ನಮ್ಮ ಕಚೇರಿಗೆ ಪತ್ರ ಕಳಿಸಿ ನಮ್ಮ ಸರ್ಕಾರಸಾಧನೆ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದರು. ಆಗ ನಮ್ಮ ಸಾಧನೆ ಯನ್ನು ಅವರಿಗೆ ತೋರಿಸಲು ಕಾಂಗ್ರೆಸ್ ಯುವ ಘಟಕದದವರು ಅವರ ಕಚೇರಿಯ ಮುಂದೆ ಬಸ್ ತೆಗೆದುಕೊಂಡು ಹೋದರೆ ಯಾರೊಬ್ಬರು ಬರಲಿಲ್ಲ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಂಪಿ ಆಗಿದ್ದಾಗ ಮಾಡಿದ ಅಭಿವೃದ್ದಿ ಪಟ್ಟಿಯನ್ನು ಓದಿದ ಸಚಿವರು ಆರ್ಟಿಕಲ್ 372 (J), ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐಸಿ, ರಾಷ್ಟ್ರೀಯ ಹೆದ್ದಾರಿಗಳು, ಗುಲಬರ್ಗಾ ಗುತ್ತಿ ರಾಷ್ಟ್ರೀಉ ಹೆದ್ದಾರಿ, ರೇಲ್ವೆ ಸ್ಟೇಷನ್ ಉನ್ನತೀಕರಣ, ಓವರ್ ಬ್ರಿಜ್, ಕಲಬುರಗಿ ಹೊಟಗಿ ಡಬ್ಲಿಂಗ್, 27 ಹೊಸ ರೇಲ್ವೆಗಳು, ವಾಡಿ ಗುಲಬರ್ಗಾ ಎಲೆಕ್ಟರೀಪಿಕೇಷನ್, ಸರ್ಕಾರ ವಸತಿ ನಿಲಯಗಳು, ಕಡೇಚೂರು ರೇಲ್ವೆ ಕೋಚ್ ಫ್ಯಾಕ್ಟರಿ, ಯಾದಗಿರಿ ಬಸ್ ಕೋಚ್ ನಿರ್ಮಾಣ ಕಾರ್ಯಾಗಾರ, ಮುಲ್ಲಾಮಾರಿ, ಸನ್ನತಿ ಬ್ಯಾರೇಜ್, ಉಚ್ಚ ನಾಯಾಲಯ, ಏಕಲವ್ಯ ಹಾಗೂ ಮೋರಾರ್ಜಿ ದೇಸಾಯಿ ವಸತಿ ನಿಲಯಗಳು, ಯಾತ್ರಿನಿವಾಸಗಳು, ನಾಗಾವಿ ಎಜುಕೇಷನ್ ಇಸ್ಟಿಟ್ಯೂಷನ್ ಇನ್ನೂ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ. ಇಂತಹ ಯಾವುದಾರೊಂದು ಯೋಜನೆ ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ಸರ್ಕಾರ RRR ಪಾಲಿಸುತ್ತಿದೆ: ರೀನೇಮಿಂಗ್, ರಿಪ್ಯಾಕೇಜಿಂಗ್, ರೀಲಾಂಚಿಂಗ್ ಎನ್ನುವ ಮೂರು ಆರ್ ಗಳನ್ನು ಬಿಜೆಪಿ ಸರ್ಕಾರ ಪಾಲಿಸುತ್ತಿದೆ. ಕಾಂಗ್ರೆಸ್ ಅಧಿಕಾರದ ಯೋಜನೆಗಳನ್ನೇ ಪುನರ್ ನಾಮಕರಣ ಮಾಡಲಾಗಿದೆ. ಮೋದಿ ಸರ್ಕಾರದ ಯಾವ ಯೋಜನೆಗಳು ಹೊಸವಲ್ಲ. ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರೇ ಗಮನಸಿ ನೀವು ಏನೇ ಮಾಡಿದರು ಅದರಲ್ಲಿ ಕನ್ನಡಿಗರ ಪಾಲು ಇರುತ್ತದೆ. ಯಾವುದಾದರೂ ಹೊಸ ಯೋಜನೆ ಇದ್ದರೆ ಹೇಳಲಿ ಎಂದು ಚಾಲೆಂಜ್ ಮಾಡುತ್ತೇನೆ. ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುವ ಕೇಂದ್ರದ ಪ್ರಾಯೋಜಿಕ ಯೋಜನೆಗಳಿಗಲ್ಲಿ ರಾಜ್ಯ ಸರ್ಕಾರದ ಸಮಪಾಲು ಇದೆ. ಹೀಗಿರುವಾಗ ಅದ್ಹೇಗೆ ಮೋದಿ ಗ್ಯಾರಂಟಿ ಆಗುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಹೇಳಲಿ. ನಮ್ಮ ಸರ್ಕಾರದ ಸಾಧನೆ ಬಗ್ಗೆ ನಾನು ಹೇಳುತ್ತೇನೆ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ ಹಾಗೂ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಅವರ ಕಡೆಯಿಂದ ಯಾರೂ ಬೇಕಾದರೂ ಬರಲಿ ಅಥವಾ ನಮ್ಮ ಅಭಿವೃದ್ದಿ ನೋಡಬೇಕಿದ್ದರೆ ಎಸಿ ಸೌಲಭ್ಯ ಹೊಂದಿರುವ ಬಸ್ ವ್ಯವಸ್ಥೆ ಮಾಡುತ್ತೇನೆ ಜೊತೆಗೆ ಒಬ್ಬ ಗೈಡ್ ವ್ಯವಸ್ಥೆ ಮಾಡುತ್ತೇನೆ ಕಾಂಗ್ರೆಸಿಗರು ನಮ್ಮೊಂದಿಗೆ ಬರಲಿ ಎಂದು ಪಂಥ್ಯಾವ್ಹಾನ ನೀಡಿದರು.
ಮನುವಾದಿಗಳಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದೇನೆ. ಆದರೆ ಅದಕ್ಕೆ ಜಾಧವ್ ಪ್ರತಿಕ್ರಿಯಿಸಿದ್ದಾರೆ. ನಾನು ಮನುವಾದಿಗಳು ಎಂದಿದ್ದೇನೆ ಅದಕ್ಕೆ ಜಾಧವ ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳಬೇಕು ? ನಾನೇನಾದರೂ ಜಾಧವ ಹೆಸರು ಹೇಳಿದ್ದೇನಾ?
ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಜಾಧವ್ ಕೇಳುತ್ತಾರೆ, ಕಾಂಗ್ರೆಸ್ ಸರ್ಕಾರ ನಿರ್ಮಿಸಿದ್ದ ಕಾಲೇಜಿನಲ್ಲಿ ಓದಿ, ಸರ್ಕಾರದ ಆಸ್ಪತ್ರೆಯಲ್ಲಿ ಕೆಲಸ ಮಾಡಿ. ಮುಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿಕೊಂಡಿದ್ದಕ್ಕೆ ಅವರನ್ನ ನಾಯಕರನ್ನಾಗಿ ಮಾಡಿದೆ ಎಂದು ಕುಟುಕಿದರು.
ಭೀಮಾ ನದಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಧವ್ ಸರಿಯಾಗಿ ವರ್ತಿಸಲಿ. ಹೋರಾಟಗಾರರ ಬಿಪಿ ಚೆಕ್ ಮಾಡುವ ಕೆಲಸ ಬೇರೆಯವರು ಮಾಡುತ್ತಾರೆ. ಅದರ ಬದಲಿ ಮಹಾರಾಷ್ಟ್ರ ದಲ್ಲಿ ಅವರದೇ ಸರ್ಕಾರ ಇದೆಯಲ್ಲ ಅವರೊಂದಿಗೆ ಮಾತನಾಡಲಿ ಎಂದು ಕಿವಿಮಾತು ಹೇಳಿದರು.
PMGSY ಯೋಜನೆಯಡಿಯಲ್ಲಿ ರೂ1000 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ವಿವರಿಸಿದರು.
ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮ ಪ್ರಭು ಪಾಟೀಲ, ಶರಣುಮೋದಿ, ಭೀಮರಾವ ಟಿಟಿ, ಶಿವಾನಂದ ಹೊನಗುಂಟಿ, ಡಾ. ಕಿರಣ್ ದೇಶಮುಖ, ಪ್ರವೀಣ ಹರವಾಳ ಹಾಗೂ ಮತ್ತಿತರ ಇದ್ದರು.