ಕೆ ಆರ್ ಎಸ್ ಹಿನ್ನೀರಿನಲ್ಲಿ ಈಜಲು ಹೋಗಿ ಇಬ್ಬರು ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

Advertisement

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲದ ಘಟನೆ ಮಂಗಳವಾರ ಜರುಗಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾ ಅಭ್ಯಾಸ ಮಾಡುತ್ತಿದ್ದ ವ ಹಾಸನ ಮೂಲದ ಚಿರಂತ್ (22) ಬೀದ‌ರ್ ಮೂಲದ ಸುನಿಲ್ (22) ಮೃತ ಪಟ್ಟವರು. ಸ್ನೇಹಿತರ ಜೊತೆ ಬೈಕ್‌‌ನಲ್ಲಿ ಬಂದಿದ್ದ ಇವರುಗಳು ಮೈಸೂರು ತಾಲ್ಲೂಕು ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರು ಪ್ರದೇಶ ಇಬ್ಬರೂ ಈಜಲು ನೀರಿಗೆ ಇಳಿದಿದ್ದರು. ಅರ್ಧಗಂಟೆ ಈಜಾಡಿದ ನಂತರ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.